ADVERTISEMENT

ಕಲಬುರಗಿ: ಎಸ್‌ಎಸ್‌ಎಲ್‌ಸಿ; 1,120 ಶಾಲೆಗಳ ಫಲಿತಾಂಶ ಶೇ 40ಕ್ಕೂ ಕಡಿಮೆ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಕಳಪೆ ಸಾಧನೆ

ಬಸೀರ ಅಹ್ಮದ್ ನಗಾರಿ
Published 19 ಮೇ 2025, 5:27 IST
Last Updated 19 ಮೇ 2025, 5:27 IST
Pavitra Bhat
   Pavitra Bhat

ಕಲಬುರಗಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಒಟ್ಟು 3,168 ಶಾಲೆಗಳಲ್ಲಿ ಬರೋಬ್ಬರಿ 1,120 ಶಾಲೆಗಳು ಶೇ 40ಕ್ಕೂ ಕಡಿಮೆ ಫಲಿತಾಂಶ ಪಡೆದಿವೆ.

ಇದರಲ್ಲಿ ಸರ್ಕಾರಿ ಶಾಲೆಗಳದ್ದೇ ಸಿಂಹಪಾಲು. ಬಹುತೇಕ ಅರ್ಧದಷ್ಟು, ಅಂದರೆ, 536 ಸರ್ಕಾರಿ ಶಾಲೆಗಳು ಶೇ 40ಕ್ಕೂ ಕಡಿಮೆ ಫಲಿತಾಂಶ ಪಡೆದಿವೆ. 227 ಅನುದಾನಿತ ಶಾಲೆ ಹಾಗೂ 357 ಖಾಸಗಿ ಶಾಲೆಗಳು ಶೇ 40ಕ್ಕೂ ಕಡಿಮೆ ಫಲಿತಾಂಶ ದಾಖಲಿಸಿವೆ.

ಕಂದಾಯ ವಿಭಾಗದ ಕೇಂದ್ರ ಕಚೇರಿ, ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯನ್ನೂ ಒಳಗೊಂಡಿರುವ ಕಲಬುರಗಿ ಜಿಲ್ಲೆಯು 486 ಶಾಲೆಗಳೊಂದಿಗೆ ಕಳಪೆ ಸಾಧನೆಯ ಪಟ್ಟಿಯಲ್ಲಿ ಕಲಬುರಗಿ ವಿಭಾಗಕ್ಕೆ ಅಗ್ರಸ್ಥಾನ ಪ‍ಡೆದಿದೆ.

ADVERTISEMENT

ಒಟ್ಟಾರೆ ಶೇ 40ಕ್ಕೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಅವಲೋಕಿಸಿದರೆ, ಖಾಸಗಿ ಶಾಲೆ ಉತ್ತಮ, ಅನುದಾನಿತ ಶಾಲೆ ಫಲಿತಾಂಶ ಮಧ್ಯಮ, ಸರ್ಕಾರಿ ಶಾಲೆ ಫಲಿತಾಂಶ ಕನಿಷ್ಠ ಎಂಬ ಅಭಿಪ್ರಾಯ ಮೂಡುವುದು ಸುಳ್ಳಲ್ಲ.

ಶೂನ್ಯ–ಪೂರ್ಣ ಫಲಿತಾಂಶ:

ಒಟ್ಟಾರೆ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಬರೋಬ್ಬರಿ 65 ಶಾಲೆ ಶೂನ್ಯ ಫಲಿತಾಂಶ ಪಡೆದಿವೆ. ಈ ಮೊದಲು ಶಿಕ್ಷಣ ಇಲಾಖೆ ಈ ಸಂಖ್ಯೆ 58 ಎಂಟು ಹೇಳಿತ್ತು. ಇದೀಗ ಪಟ್ಟಿಯನ್ನು ಪರಿಷ್ಕರಿಸಿದೆ.

ಫಲಿತಾಂಶ ಕುಸಿತದ ಕಾರ್ಮೋಡದ ನಡುವೆ ಕೋಲ್ಮಿಂಚಿನಂತೆ ಒಟ್ಟಾರೆ 53 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಅದರಲ್ಲಿ 25 ಸರ್ಕಾರಿ ಶಾಲೆಗಳೆಂಬುದು ವಿಶೇಷ. ಇನ್ನುಳಿದ 28ರಲ್ಲಿ ಎರಡು ಅನುದಾನಿತ ಶಾಲೆಗಳಾದರೆ, 26 ಖಾಸಗಿ ಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.