ADVERTISEMENT

ರಾಜ್ಯಮಟ್ಟದ ವಚನ ಕಂಠಪಾಠ ಸ್ಫರ್ಧೆ: 951 ವಚನ ಹೇಳಿದ ಮರಪಳ್ಳಿಗೆ ದ್ವಿತೀಯ ಬಹುಮಾನ

951 ವಚನ ಹೇಳಿದ ಚಿಮ್ಮನಚೋಡ ಗ್ರಾಮದ ಶರಣಜೀವಿ ಜಗದೀಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:21 IST
Last Updated 25 ನವೆಂಬರ್ 2025, 4:21 IST
ಜಗದೀಶ ಮರಪಳ್ಳಿ
ಜಗದೀಶ ಮರಪಳ್ಳಿ   

ಚಿಂಚೋಳಿ: ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಜಗದೀಶ ಮರಪಳ್ಳಿ ಅವರು 951 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಸನ ಮತ್ತು ತೃತೀಯ ಬಹುಮಾನ ಬೆಳಗಾವಿ ಜಿಲ್ಲೆಗೆ ಲಭಿಸಿವೆ. ಗುತ್ತಿಗೆದಾರರಾಗಿದ್ದ ಜಗದೀಶ ಮರಪಳ್ಳಿ ಅವರು ಮೂಲವೃತ್ತಿ ಕೈಬಿಟ್ಟಿದ್ದು ಸದ್ಯ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

2023-24ನೇ ಸಾಲಿನಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ 698 ವಚನಗಳನ್ನು ಕಂಠಪಾಠದ ಮೂಲಕ ಹೇಳಿ ದ್ವಿತೀಯ ಬಹುಮಾನ ಪಡೆದಿದ್ದರು. ಈಗ ಮತ್ತೊಮ್ಮೆ ಅವರು ದ್ವೀತೀಯ ಸ್ಥಾನ ಪಡೆದಿದ್ದು, ಕಲ್ಯಾಣ ಕರ್ನಾಟಕದ ಮೊದಲಿಗರಾಗಿದ್ದಾರೆ.

ADVERTISEMENT

ಇವರ ಸಾಧನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಚಿಮ್ಮನಚೋಡ ಪರುಷಕಟ್ಟೆ ಸಮಿತಿ ಸಲಹೆಗಾರ ಡಾ.ಚಂದ್ರಪ್ರಕಾಶ ರಗಟೆ ಶ್ಲಾಘಿಸಿದ್ದಾರೆ.

ಈ ಬಗ್ಗೆ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಅಧ್ಯಕ್ಷ ಆನಂದ ಬೆಡಸೂರು, ಖಜಾಂಚಿ ಶಿವಮೂರ್ತಿ ಜಾಡರ, ಕ್ರಿಯಾಮೂರ್ತಿ ವೀರಸಂಗಯ್ಯ ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ , ಚಂದ್ರಯ್ಯ ಮದರಗಿಮಠ ,ವಿಶ್ವನಾಥ ಬುರುಕಪಳ್ಳಿ, ಸಂಗಮೇಶ ರಗಟೆ,ಶಾಂತಪ್ಪ ದುಬಲಗುಂಡಿ, ವಿಜಯಕುಮಾರ ಶಂಭುಲಿಂಗಪ್ಪ ಬೆಡಸೂರು,ಶರಣಕುಮಾರ ನೇತಿ, ಗುರುಶಾಂತ ಹುಂಡೇಕಾರ,ಮಲ್ಲಿಕಾರ್ಜುನ ಸಜ್ಜನ ಶಾಂತಕುಮಾರ ಸೇತಾಳಗೇರಾ ಸೇರಿದಂತೆ ಗ್ರಾಮದ ಬಸವ ಭಕ್ತರು ಶುಭಕೋರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.