ADVERTISEMENT

ಕುರಿಗಾಹಿಯ ಕುಡುಗೋಲು ತಗುಲಿ ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:11 IST
Last Updated 12 ಏಪ್ರಿಲ್ 2019, 20:11 IST
ಮೇಘಾ
ಮೇಘಾ   

ಕಲಬುರ್ಗಿ: ನಗರದ ರಾಮಮಂದಿರ ಬಳಿಯ ರಿಂಗ್ ರಸ್ತೆಯಲ್ಲಿ ಕುರಿಗಾಹಿಯ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶುಕ್ರವಾರ ಮೃತಪಟ್ಟಿದ್ದಾರೆ.

ಮೇಘಾ ಹಿರೇಗೌಡರ (20) ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದರು.

‘ಕುರಿಗಾಹಿಯು ಸೈಕಲ್ ಮೇಲೆ ಕುಡುಗೋಲು ಇಟ್ಟುಕೊಂಡು ಹೋಗುತ್ತಿದ್ದ ಮಾರ್ಗದಲ್ಲೇ ವಿದ್ಯಾರ್ಥಿನಿ ಸ್ಕೂಟರ್ ಮೇಲೆ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ಕುರಿಗಾಹಿ ಇದ್ದಕ್ಕಿದ್ದಂತೆ ಎಡಭಾಗಕ್ಕೆ ಚಲಿಸಿದ್ದಾನೆ. ಹಿಂದೆ ಬರುತ್ತಿದ್ದ ವಿದ್ಯಾರ್ಥಿನಿ ತಕ್ಷಣ ಸ್ಕೂಟರ್ ನಿಲ್ಲಿಸಲು ಯತ್ನಿಸಿದಾಗ ಅದು ಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಆಗ ಕುಡುಗೋಲು ನೇರವಾಗಿ ಕುತ್ತಿಗೆಗೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಸ್ಪತ್ರೆ ಸಾಗಿಸುವಾಗ ಮಾರ್ಗದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕುರಿಗಾಹಿ ಸೈಕಲ್ ಬಿಟ್ಟು ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.