ಕಲಬುರಗಿ: ‘ಅಕ್ಟೋಬರ್‌ನಲ್ಲಿ ನಗರದಲ್ಲಿ ಜಿಲ್ಲಾ ಪ್ರಥಮ ಸೂಫಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ಜಿಲ್ಲೆ ಭಾವೈಕ್ಯದ ನಾಡು. 12ನೇ ಶತಮಾನದ ಬಸವಾದಿ ಶರಣರ ಕಾಯಕ-ದಾಸೋಹ ಸೂತ್ರ ಪಾಲಿಸಿದ ಶರಣಬಸವೇಶ್ವರರು, ಶ್ರೇಷ್ಠ ಸೂಫಿ ಸಂತ ಖಾಜಾ ಬಂದಾನವಾಜರು ನಡೆದಾಡಿದ ಪವಿತ್ರ ನೆಲವಿದು’ ಎಂದರು.
ಕರ್ನಾಟಕದ ಸೂಫಿ ಪರಂಪರೆಗೆ ಜಿಲ್ಲೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಶ್ರೇಷ್ಠ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸಮ್ಮೇಳನದ ನಿಮಿತ್ತ ಸ್ವಾಗತ ಸಮಿತಿ ರಚಿಸಿ ಅಧಿಕೃತ ಚಾಲನೆ ನೀಡಲಾಗುವುದು. ಬರುವ ದಿನಗಳಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಹಾಗೂ ಅದರ ರೂಪುರೇಷೆಗಳ ಕುರಿತು ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರಮೇಶ ಬಡಿಗೇರ, ಸಿದ್ಧಲಿಂಗ ಬಾಳಿ, ಬಾಬುರಾವ ಪಾಟೀಲ, ಸೋಮಶೇಖರ ನಂದಿಧ್ವಜ, ಶಿವಾನಂದ ಪೂಜಾರಿ, ಸೋಮಶೇಖರಯ್ಯ ಹೊಸಮಠ, ಜೆ.ಎಸ್.ವಿನೋದಕುಮಾರ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ದಿನೇಶ ಮದಕರಿ, ಹಣಮಂತ ಪ್ರಭು, ಎಂ.ಎನ್.ಸುಗಂಧಿ, ಪ್ರಭುಲಿಂಗ ಮೂಲಗೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.