ADVERTISEMENT

ಕಲಬುರಗಿ: ರಂಗಾಯಣದ ನಿರ್ದೇಶಕಿಯಾಗಿ ಸುಜಾತಾ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:50 IST
Last Updated 16 ಆಗಸ್ಟ್ 2024, 15:50 IST
ಕಲಬುರಗಿ ರಂಗಾಯಣದ ನೂತನ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ ಸುಜಾತಾ ಜಂಗಮಶೆಟ್ಟಿ ಅವರಿಗೆ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಪುಷ್ಪಗುಚ್ಛ ನೀಡಿದರು
ಕಲಬುರಗಿ ರಂಗಾಯಣದ ನೂತನ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ ಸುಜಾತಾ ಜಂಗಮಶೆಟ್ಟಿ ಅವರಿಗೆ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಪುಷ್ಪಗುಚ್ಛ ನೀಡಿದರು   

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಲಬುರಗಿ ರಂಗಾಯಣದ ನಿರ್ದೇಶಕಿಯಾಗಿ ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ದಶಕದ ಹಿಂದೆ ಆರಂಭವಾದ ಕಲಬುರಗಿ ರಂಗಾಯಣಕ್ಕೆ ಸುಜಾತಾ ಮೊದಲ ಮಹಿಳಾ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ.

ರಂಗಾಯಣ ಆಡಳಿತಾಧಿಕಾರಿ ಜಗದೇಶ್ವರಿ ಶಿವಕೇರಿ ಅವರು ಸುಜಾತಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.‌

ADVERTISEMENT

ಸುಜಾತಾ ಅವರು ಆಕಾಶವಾಣಿಯ ನಾಟಕ ವಿಭಾಗದಲ್ಲಿ, ‘ಬಿ’ ಹೈ ಶ್ರೇಣಿ ಕಲಾವಿದರಾಗಿದ್ದು, ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದರು. ಟಿವಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ. ಸಿಂಡಿಕೇಟ್ ಸದಸ್ಯರಾಗಿ, ರಂಗಸಮಾಜದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ ರಂಗಭೂಮಿಯವರಿಗೆ ಕೊಡಮಾಡುವ ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಸಮಿತಿ ಸದಸ್ಯರಾಗಿ ‌ಕಾರ್ಯನಿರ್ವಹಿಸಿದ್ದಾರೆ.

ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರ ಅವಧಿ ಮುಗಿದ ಬಳಿಕ ನಿರ್ದೇಶಕ ಸ್ಥಾನ ಖಾಲಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.