ತಾವರಗೇರಾ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಶುಕ್ರವಾರ ಲಾಟರಿ ಪ್ರಕ್ರಿಯೆ ಮೂಲಕ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
2024–25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 82 ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಲಾಟರಿ ಎತ್ತಿ ವಿದ್ಯಾರ್ಥಿಗಳನ್ನು ಎಲ್‌ಕೆಜಿಗೆ ಆಯ್ಕೆ ಮಾಡಲಾಯಿತು.
ಪ್ರಾಚಾರ್ಯ ಎಸ್.ಎಸ್.ಪೋರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪ ಪ್ರಾಚಾರ್ಯ ಎಂ.ಎಂ.ಗೊಣ್ಣಾಗರ, ಬಿಆರ್‌ಸಿ ಸಂಪನ್ಮೂಲ ವ್ಯಕ್ತಿ ಕಾಶೀನಾಥ ನಾಗಲಿಕರ, ಮುಖ್ಯ ಶಿಕ್ಷಕ ಪರಸಪ್ಪ ಹೊಸಮನಿ ಮತ್ತು ಸಿಬ್ಬಂದಿ ವರ್ಗ, ಪಾಲಕರು–ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.