ADVERTISEMENT

ಕಾಳಗಿ: ಸಮೀಕ್ಷೆಗೆ ಹೊರಟಿದ್ದ ಶಿಕ್ಷಕ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 8:33 IST
Last Updated 16 ಅಕ್ಟೋಬರ್ 2025, 8:33 IST
<div class="paragraphs"><p>ಕಲಬುರಗಿ ಜಿಲ್ಲೆಯ ಕಾಳಗಿ‌ ತಾಲ್ಲೂಕಿನಲ್ಲಿ ಬೈಕ್ ನಿಂದ ಬಿದ್ದು ಗಾಯಗೊಂಡ ಶಿಕ್ಷಕ ಚಿಕಿತ್ಸೆ ಪಡೆದರು</p></div>

ಕಲಬುರಗಿ ಜಿಲ್ಲೆಯ ಕಾಳಗಿ‌ ತಾಲ್ಲೂಕಿನಲ್ಲಿ ಬೈಕ್ ನಿಂದ ಬಿದ್ದು ಗಾಯಗೊಂಡ ಶಿಕ್ಷಕ ಚಿಕಿತ್ಸೆ ಪಡೆದರು

   

ಕಾಳಗಿ (ಕಲಬುರಗಿ ಜಿಲ್ಲೆ): ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳುತ್ತಿದ್ದ ಶಿಕ್ಷಕ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆ ತಾಲ್ಲೂಕಿನ ತೆಂಗಳಿ-ಸಾಲಹಳ್ಳಿ ರಸ್ತೆ ಮಾರ್ಗದಲ್ಲಿ ಗುರುವಾರ ಜರುಗಿದೆ.

ಕೊಡದೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮಾಣಿಕರಾವ ಪಾಟೀಲ ದೋಟಿಕೋಳ (49) ಗಾಯಗೊಂಡಿರುವ ಶಿಕ್ಷಕ.

ADVERTISEMENT

ರಸ್ತೆ ಮಧ್ಯೆ ಹಂಪನಲ್ಲಿ ಬೈಕ್ ಸ್ಕಿಡ್ ಆಗಿದೆ. ಹೆಲ್ಮೆಟ್ ಧರಿಸಿದ್ದರಿಂದ ತಲೆ, ಮುಖಕ್ಕೆ ಯಾವುದೇ ಗಾಯವಾಗಿಲ್ಲ. ಎರಡೂ ಕೈ, ಕಾಲುಗಳಿಗೆ ತೀವ್ರ ಗಾಯವಾಗಿ ಕೈಗೆ ಹೊಲಿಗೆ ಹಾಕಲಾಗಿದೆ.

ತೆಂಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಪಂಚಾಯಿತಿ ಇಒ ಡಾ.ಬಸಲಿಂಗಪ್ಪ ಡಿಗ್ಗಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಲ್ಲೂಕು ಅಧ್ಯಕ್ಷ ಮಹಾಂತೇಶ ಪಂಚಾಳ ಅನೇಕ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.