ADVERTISEMENT

ಮಂದರವಾಡ: ಸಿದ್ಧಬಸವೇಶ್ವರ ದೇಗುಲ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 13:35 IST
Last Updated 5 ಜೂನ್ 2023, 13:35 IST
ಜೇವರ್ಗಿ ತಾಲ್ಲೂಕಿನ ಮಂದರವಾಡದಲ್ಲಿ ಸಿದ್ಧಬಸವೇಶ್ವರರ ದೇಗುಲ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು
ಜೇವರ್ಗಿ ತಾಲ್ಲೂಕಿನ ಮಂದರವಾಡದಲ್ಲಿ ಸಿದ್ಧಬಸವೇಶ್ವರರ ದೇಗುಲ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು    

ಜೇವರ್ಗಿ: ಮನುಕುಲದ ಉದ್ಧಾರಕ್ಕೆ ಪವಾಡ ಪುರುಷ ಸಿದ್ಧಬಸವೇಶ್ವರರ ಕೊಡುಗೆ ಅಪಾರವಾಗಿದೆ. ಅವರು ಜೀವನದುದ್ದಕ್ಕೂ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ ಎಂದು ಸೊನ್ನ ವಿರಕ್ತಮಠದ ಪೀಠಾಧಿಪತಿ ಡಾ. ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸುಕ್ಷೇತ್ರ ಮಂದರವಾಡ ಗ್ರಾಮದಲ್ಲಿ ಭಾನುವಾರ ಸಿದ್ಧಬಸವೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ಧಬಸವೇಶ್ವರರು ಸತ್ಯ, ಶುದ್ಧ ಕಾಯಕದೊಂದಿಗೆ ಭಕ್ತಾದಿಗಳಿಗೆ ದಾಸೋಹ ಸೇವೆ ಸಲ್ಲಿಸುತ್ತಿದ್ದರು. ತಮ್ಮ ದರ್ಶನಕ್ಕೆ ಬರುವ ಭಕ್ತರಿಗೆ ಕಾಯಕ ಮತ್ತು ದಾಸೋಹದ ಮಹತ್ವದ ಕುರಿತು ಅರಿವು ಮೂಡಿಸುತ್ತಿದ್ದರು. ಅವರ ಸಮಾಜ ಮುಖಿ ಚಿಂತನೆಗಳು ಇಂದಿಗೂ ದಾರಿದೀಪಗಳಾಗಿವೆ ಎಂದು ತಿಳಿಸಿದರು.

ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ ಮಾತನಾಡಿ, ಕೃಷಿಗೂ ನಮ್ಮ ನಿತ್ಯ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ವಿದ್ಯಾವಂತ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಹೊನ್ನಳ್ಳಿಯ ವೀರಘಂಟಿ ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಮಂದರವಾಡ ಗ್ರಾಮದ ಕಲ್ಲಯ್ಯ ಹಿರೇಮಠ ಉಪಸ್ಥಿತರಿದ್ದರು. ಶಿವರುದ್ರಯ್ಯ ಗೌಡಗಾಂವ್ ಸಂಗೀತ ಸೇವೆ ಸಲ್ಲಿಸಿದರು. ಶಿವಾನಂದ ಕಟ್ಟಿಸಂಗಾವಿ ತಬಲಾ ಸಾಥ್‌ ನೀಡಿದರು. ಸುಲೇಖಾ ಬಿ. ಮಾಲಿಪಾಟೀಲ ನಿರೂಪಿಸಿದರು.


ಪ್ರವಚನದ ಅಂಗವಾಗಿ ಸತತ 11ದಿನಗಳ ಪರ್ಯಂತ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂದರವಾಡ ಗ್ರಾಮದ ಭೀಮಾ ನದಿಯಲ್ಲಿ ಸಿದ್ಧಬಸವೇಶ್ವರರ ಗಂಗಾಸ್ನಾನ, ಸಿದ್ಧಬಸವೇಶ್ವರ ಮೂರ್ತಿ ಪಲ್ಲಕ್ಕಿ ಮೆರವಣಿಗೆ ಹಾಗೂ ಪುರವಂತರ ಸೇವೆ ನಡೆಸಲಾಯಿತು.

೦೫ಜೆವಿಜಿ೦೧: ಜೇವರ್ಗಿ: ತಾಲ್ಲೂಕಿನ ಮಂದರವಾಡ ಗ್ರಾಮದಲ್ಲಿ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತö್ಯ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಸಿದ್ಧಬಸವೇಶ್ವರರ ಪ್ರವಚನ ನಡೆಸಿಕೊಟ್ಟರು.


ಮನುಕುಲದ ಉದ್ಧಾರಕ್ಕೆ ಪವಾಡ ಪುರುಷ ಸಿದ್ಧಬಸವೇಶ್ವರರ ಕೊಡುಗೆ ಅಪಾರ: ಸೊನ್ನದ ಡಾ. ಶಿವಾನಂದ ಸ್ವಾಮೀಜಿ ಅಭಿಮತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.