ADVERTISEMENT

ಜವಳಿ ಪಾರ್ಕ್‌ ಆರಂಭಕ್ಕೆ ₹1 ಸಾವಿರ ಕೋಟಿ ಕೊಡಿ: ಮಂಜುನಾಥ ನಾಲವಾರಕರ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:39 IST
Last Updated 17 ಜನವರಿ 2026, 6:39 IST
ಮಂಜುನಾಥ ನಾಲವಾರಕರ್
ಮಂಜುನಾಥ ನಾಲವಾರಕರ್   

ಕಲಬುರಗಿ: ‘ಫಿರೋಜಾಬಾದ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಜವಳಿ (ಟೆಕ್ಸ್‌ಟೈಲ್) ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಕೂಡಲೇ ಆರಂಭಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ₹ 1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಮಂಜುನಾಥ ನಾಲವಾರಕರ್‌ ಆಗ್ರಹಿಸಿದರು.

‘ಜವಳಿ ಪಾರ್ಕ್‌ಗಾಗಿ ಈಗಾಗಲೇ ನಿವೇಶನಗಳನ್ನು ಪಡೆದುಕೊಳ್ಳಲಾಗಿದೆ. ಆದರೆ, ಅಲ್ಲಿ ರಸ್ತೆ, ಮೂಲಸೌಕರ್ಯ ಸೇರಿ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹ 1 ಸಾವಿರ ಕೋಟಿ ಅನುದಾನ ಅವಶ್ಯಕತೆ ಇದೆ. ಕೆಕೆಆರ್‌ಡಿಬಿಯಿಂದ ₹ 150 ಕೋಟಿ, ಮುಖ್ಯಮಂತ್ರಿ ಅವರು ₹ 200 ಕೋಟಿ ಅನುದಾನ ಒದಗಿಸಬೇಕು. ಇನ್ನುಳಿದ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಟೆಕ್ಸ್‌ಟೈಲ್‌ ಕಂಪನಿಗಳು ಬಂದು ಜವಳಿ ಪಾರ್ಕ್‌ ಆರಂಭವಾದರೆ ಗುಳೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಒಕ್ಕೂಟದ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನುದಾನ ನೀಡುವ ಜೊತೆಗೆ ಜವಳಿ ಪಾರ್ಕ್‌ ಆರಂಭಕ್ಕೆ ಒತ್ತಾಯಿಸಲಾಗುವುದು. ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಒಕ್ಕೂಟದ ಒಂದೊಂದು ಸಂಘಟನೆಯಿಂದ ಒಂದೊಂದು ದಿನ ಶಾಸಕರು, ಸಂಸದರ ಮನೆ ಎದುರು ಸರಣಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಮುಖಂಡರಾದ ದತ್ತು ಭಾಸಗಿ, ರವಿ ದೇಗಾಂವ, ಮನೋಹರ ಬೀರನೂರ, ಶರಣು ಹೊಸಮನಿ, ಸಂಜೀವಕುಮಾರ ಸಾವಳಗಿ, ಆನಂದ ತೆಗನೂರ, ಭೀಮಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.