ಚಿಂಚೋಳಿ: ತಾಲ್ಲೂಕಿನ ಯಲಕಪಳ್ಳಿಯ ಅಮರೇಶ್ವರ ಮಠದ ಶಂಬುಲಿಂಗಯ್ಯ ಸ್ವಾಮೀಜಿ (78) ಸೋಮವಾರ ನಸುಕಿನ ಜಾವ ನಿಧನರಾದರು.
ಮೃತರ ಅಂತ್ಯಕ್ರಿಯೆ ಸಂಜೆ 4 ಗಂಟೆಗೆ ಶ್ರೀಮಠದ ಆವರಣದಲ್ಲಿ ವೀರಶೈವ ಧರ್ಮದ ವಿಧಿ ವಿಧಾನಗಳನುಸಾರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಕ್ರೀಯಾಸಮಾಧಿ ಮಾಡಲಾಯಿತು.
ಮೃತರು ಪತ್ನಿ, ನಾಲ್ಕು ಜನ ಮಕ್ಕಳು ಹಾಗೂ ಪುತ್ರಿ ಹೊಂದಿದ್ದರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತರಾಗಿದ್ದ ಅವರು, ಸೂಗೂರಿನ ಹಿರೇಮಠದ ಶಾಖಾಮಠವಾದ ಅಮರೇಶ್ವರ ಮಠದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಸಮಾಜದಲ್ಲಿ ಉತ್ತಮ ಕಾರ್ಯ ಮಾಡಿದ ಮಹನೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸುತ್ತಿದ್ದರು.
ಶ್ರೀಗಳ ಅಂತ್ಯಕ್ರಿಯೆಯಲ್ಲಿ ಸೂಗೂರು ಕೆ ಸಂಸ್ಥಾನ ಹಿರೇಮಠದ ಚನ್ನರುದ್ರಮುನಿ ಶಿವಾಚಾರ್ಯರು, ಟೆಂಗಳಿಯ ಶಾಂತಸೋಮನಾಥ ಶಿವಾಚಾರ್ಯರು, ಹೊಸಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಬಣಮಿಗಿಯ ರಾಚೋಟೇಶ್ವರ ಶಿವಾಚಾರ್ಯರು, ಸುಲೇಪೇಟ ಟೆಂಗಿನಮಠದ ಸಿದ್ಧರಾಮ ಶಿವಾಚಾರ್ಯರು ಪಾಲ್ಗೊಂಡು ವೀರಶೈವರ ಧಾರ್ಮಿಕ ವಿಧಿ ವಿಧಾನಗಳನುಸಾರ ಕ್ರಿಯಾಸಮಾಧಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.