
ಜೇವರ್ಗಿ: ಈಜಲು ಹೋಗಿ ನಾಪತ್ತೆಯಾಗಿರುವ ಕಲಬುರಗಿ ನಗರದ ಯುವಕ ಮಹಾದೇವ ರೇವಪ್ಪ ಬೆಡಜುರ್ಗಿ ಮೂರು ದಿನವಾದರೂ ಪತ್ತೆಯಾಗದ ಕಾರಣ ಕುಟುಂಬದ ಸದಸ್ಯರಲ್ಲಿ ಆಕ್ರಂದನ ಮಡುಗಟ್ಟಿದೆ.
ಸತತ ಮೂರು ದಿನಗಳಿಂದ ತಾಲ್ಲೂಕು ಆಡಳಿತ ಶೋಧ ಕಾರ್ಯ ನಡೆಸಿದೆ. ಭೀಮಾನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಕ್ಕೆ ಸ್ವಲ್ಪ ಅಡ್ಡಿಯಾಗಿದ್ದು, ಆದರೂ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡು ತೆಪ್ಪಗಳೊಂದಿಗೆ ಸ್ಥಳೀಯ ಪೊಲೀಸರು, ನುರಿತ ಮೀನುಗಾರರ ಜೊತೆಗೆ ಸ್ಥಳೀಯ ಯುವಕರು ಶೋಧ ಕಾರ್ಯ ನಡೆಸಿದ್ದಾರೆ.
ಭೀಮಾನದಿಗೆ ಹೆಚ್ಚಿನ ನೀರು ಬಿಟ್ಟ ಪರಿಣಾಮ ಹುಡುಕುವುದು ಕಷ್ಟದ ಕೆಲಸವಾಗಿದೆ. ಸರಡಗಿ ಸೇತುವೆಯಿಂದ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆವರೆಗೂ (18.ಕಿ.ಮೀ) ಕಾರ್ಯಾಚರಣೆ ನಡೆಸಲಾಗುತ್ತಿದೆ. ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಸಾಬ ನದಾಫ್, ಸಬ್ ಇನ್‌ಸ್ಪೆಕ್ಟರ್ ಗಜಾನಂದ ಬಿರಾದಾರ ನೇತೃತ್ವದಲ್ಲಿ ಶೋಧ ನಡೆದಿದೆ.
ತಾಲ್ಲೂಕಿನ ಕೋನಾಹಿಪ್ಪರಗಾ-ಸರಡಗಿ ಸೇತುವೆ ಬಳಿ ಭೀಮಾ ನದಿಯಲ್ಲಿ ಮಹಾದೇವ ಇಳಿದಾಗ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾರೆ. ಅವರಿಗೆ ಈಜು ಬರುತ್ತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.