ADVERTISEMENT

ಕಲಬುರಗಿ: ಯುವ ಕಲಾವಿದರಿಗೆ ಉಚಿತ ರಂಗ ತರಬೇತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:21 IST
Last Updated 30 ಜುಲೈ 2024, 14:21 IST

ಕಲಬುರಗಿ: ನಗರದ ಜನರಂಗ ಸಾಂಸ್ಕೖತಿಕ ಸಂಘಟನೆಯು ಆಗಸ್ಟ್ 5ರಿಂದ 25ರವರೆಗೆ ರಂಗ ಭೂಮಿಯಲ್ಲಿ ಆಸಕ್ತಿಯುಳ್ಳ ಹೊಸ ಕಲಾವಿದರಿಗೆ ಉಚಿತ ರಂಗತರಬೇತಿಯನ್ನು ಹಮ್ಮಿಕೊಂಡಿದೆ.

ತರಬೇತಿಯಲ್ಲಿ ರಂಗಾಟಗಳ ಜೊತೆ ಅಂಗಿಕ, ವಾಚಿಕ, ನಟನೆ, ಮೇಕಪ್ ಹಾಗೂ ವಸ್ತ್ರಾಲಂಕಾರಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯ ಪ್ರಯೋಜನಕ್ಕಾಗಿ ಶಿಬಿರಾರ್ಥಿಗಳು ನಾಟಕ ಪ್ರದರ್ಶನ ನೀಡಬೇಕಾಗುತ್ತದೆ. ಆಸಕ್ತ ಕಲಾವಿದರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಜನರಂಗ ಸಂಘಟನೆಯ ಅಧ್ಯಕ್ಷ ಶಂಕ್ರಯ್ಯ ಘಂಟಿ ಕೋರಿದ್ದಾರೆ.

ಶಿಬಿರ ಪೂರ್ಣಗೊಂಡ ಬಳಿಕ ಪ್ರಮಾಣಪತ್ರ ನೀಡಲಾಗುವುದು. ರಂಗ ತರಬೇತಿ ಪ್ರತಿದಿನ ಸಂಜೆ 6ರಿಂದ 8.30ರವರೆಗೆ ಜರುಗಲಿದೆ.

ADVERTISEMENT

ವಿಳಾಸ– ಜನರಂಗ ಕಲಬುರಗಿ, # 338, ಸರ್ವೆ ನಂ.62, ಜಿಡಿಎ ಲೇಔಟ್, ರಾಜಾಪುರ–ಬಡೇಪುರ ಬಡಾವಣೆ, ಕುಸನೂರ ರಸ್ತೆ, ಕಲಬುರಗಿ–585105. ಸಂಪರ್ಕ–94482 52168.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.