ADVERTISEMENT

ಚಿಂಚೋಳಿ: ಪ್ರೌಢಶಾಲೆಗಳಲ್ಲಿ ಸರಣಿ ಕಳ್ಳತನ

16 ಬ್ಯಾಟರಿ, ಸಿಸಿ ಕ್ಯಾಮೆರಾ ರೆಕಾರ್ಡಿಂಗ್‌ ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 5:38 IST
Last Updated 8 ನವೆಂಬರ್ 2022, 5:38 IST

ಚಿಂಚೋಳಿ: ತಾಲ್ಲೂಕಿನ ಹಸರಗುಡಂಗಿ ಹಾಗೂ ಐನೋಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಳ್ಳತನ
ನಡೆದಿದೆ.

ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ನಾಗಾ ಇದಲಾಯಿ ಪ್ರೌಢಶಾಲೆಯ ಕೀಲಿ ಮುರಿದು ಶೋಧ ನಡೆಸಿದ್ದಾರೆ.

ಹಸರಗುಂಡಗಿ ಪ್ರೌಢಶಾಲೆಯಲ್ಲಿ 8 ಬ್ಯಾಟರಿ, ಐನೋಳ್ಳಿ ಪ್ರೌಢಶಾಲೆಯಲ್ಲಿ 8 ಬ್ಯಾಟರಿಯ ಜತೆಗೆ ಸಿಸಿ ಕ್ಯಾಮೆರಾಗಳ ರೆಕಾರ್ಡಿಂಗ್‌ ಸಂಗ್ರಹಣೆಯ ಡಿವಿಆರ್ ದೋಚಿದ್ದಾರೆ. ನಾಗಾಈದಲಾಯಿ ಗ್ರಾಮದಲ್ಲಿ ಬ್ಯಾಟರಿಗಳಿಲ್ಲದ ಕಾರಣ ಅಲ್ಲಿ ಯಾವ ವಸ್ತುಗಳೂ ಕಳ್ಳತನವಾಗಿಲ್ಲ.

ADVERTISEMENT

ಸೋಮವಾರ ಶಾಲೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಉಭಯ ಶಾಲೆಗಳ ಮುಖ್ಯಶಿಕ್ಷಕರ ದೂರು ಆಧರಿಸಿ ಚಿಂಚೋಳಿ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಮಂಜುನಾಥರೆಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.