ADVERTISEMENT

ಕೊಳ್ಳೂರು ಸಿಡಿಲು ಬಡಿದು 38 ಮೇಕೆಗಳ ಸಾವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 11:50 IST
Last Updated 30 ಸೆಪ್ಟೆಂಬರ್ 2020, 11:50 IST

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಸಿಡಿಲು ಬಡಿದು 38 ಮೇಕೆಗಳು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ 3.30ಕ್ಕೆ ಸಂಭವಿಸಿದೆ.

ಗ್ರಾಮದ ಸತೀಶ ಹುಗ್ಗೆಳ್ಳಿ, ಬಾಬು ಗುತ್ತಿ, ದಶರಥ ಗುತ್ತಿ, ಅಮೃತ ದೊಡನೋರ, ಗುಂಡಪ್ಪ, ವಿಠಲ ಗಡ್ಡಿಮನಿ, ತುಳಜಪ್ಪ ಅವರಿಗೆ ಸೇರಿದ್ದ 38 ಮೇಕೆಗಳು ಮೃತಪಟ್ಟಿವೆ. ಮೇಕೆಗಳನ್ನು ಮೇಯಿಸಲು ಅಡವಿಗೆ ಹೋದಾಗ ಗುಡುಗು ಮಿಂಚು ಸಹಿತ ಮಳೆಯಾಗಿದ್ದು ಜತೆಗೆ ಬಡಿದ ಸಿಡಿಲಿನಿಂದ ಮೇಕೆಗಳು ಮೃತಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT