ಕಲಬುರಗಿ: ‘ಆಧುನಿಕತೆಯ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸ್ಪರ್ಧಾತ್ಮಕತೆಯ ಕೌಶಲ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ಹೇಳಿದರು.
ಅಫಜಲಪುರ ತಾಲ್ಲೂಕಿನ ಚವಡಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಗೆಯಂತೆ ನಿರಂತರ ಪ್ರಯತ್ನ, ಬಕಪಕ್ಷಿಯಂತೆ ಧ್ಯಾನ, ನಾಯಿಯಂತೆ ನಿದ್ರೆ, ಗೃಹತ್ಯಾಗ, ಮಿತಾಹಾರ’ ಅಳವಡಿಸಿಕೊಳ್ಳಬೇಕು’ ಎಂದು ಪಂಚತಂತ್ರಗಳ ಮುಖಾಂತರ ವಿದ್ಯಾರ್ಥಿಗಳಿಗೆ ಸಾಧನೆಯ ರಹಸ್ಯ ಬಿಚ್ಚಿಟ್ಟರು.
‘ಪೋಲಿಸ್ ಎಂದರೆ ಭಯ ಬೇಡ ಸಮಾಜದಲ್ಲಿ ಜನರ ಸಲುವಾಗಿ ಅಭಯವನ್ನು ನೀಡುವುದು’ ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯರಾದ ಸುಭಾಷ ಯವಳೆ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಅಧಿಕಾರಿ ಪ್ರವೀಣ ಮಳ್ಳಿ ಸ್ವಾಗತಿಸಿದರು. ಸಿದ್ದಪ್ಪಾ ಜಮಾದಾರ ವಂದಿಸಿದರು. ದೇವಿಂದ್ರಪ್ಪಾ ಕುಂಬಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.