ADVERTISEMENT

ಕಲಬುರಗಿ: ಯಲಹಂಕವರೆಗೆ ಮಾತ್ರ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:16 IST
Last Updated 3 ಜನವರಿ 2026, 6:16 IST
ರೈಲು (ಸಾಂಧರ್ಬಿಕ ಚಿತ್ರ)
ರೈಲು (ಸಾಂಧರ್ಬಿಕ ಚಿತ್ರ)   

ಕಲಬುರಗಿ: ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ನವೀಕರಣ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡು ವಿಶೇಷ ರೈಲುಗಳು ಯಲಹಂಕ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದ್ದು, ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಬೇಕು ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜ.3ರಂದು ಬೀದರ್‌ನಿಂದ ಹೊರಡುವ ಬೀದರ್‌- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06540) ಹಾಗೂ ಜ.4ರಂದು ಕಲಬುರಗಿ ರೈಲು ನಿಲ್ದಾಣದಿಂದ ಹೊರಡುವ ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (22231) ರೈಲುಗಳು ಯಲಹಂಕ ರೈಲು ನಿಲ್ದಾಣದವರೆಗೆ ಮಾತ್ರ ಪ್ರಯಾಣಿಸಲಿವೆ.

ಅದೇ ರೀತಿ ಜ.4ರಂದು ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ (22232) ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಎಸ್‌ಎಂವಿಟಿ ಬೆಂಗಳೂರು–ಬೀದರ್ ಎಕ್ಸ್‌ಪ್ರೆಸ್ (06539) ಯಲಹಂಕ ರೈಲು ನಿಲ್ದಾಣದಿಂದ ನಿಗದಿತ ಸಮಯದಲ್ಲಿ ಸಂಚಾರ ಆರಂಭಿಸಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.