ADVERTISEMENT

ಕಾರ್ಯಕರ್ತೆಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 2:52 IST
Last Updated 19 ಮೇ 2022, 2:52 IST
ಅಫಜಲಪುರ ತಾಲ್ಲೂಕಿನ ರಾಮನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಸಂಯೋಜಕ ಗುರು ಜಮಾಲಪುರ ಚಾಲನೆ ನೀಡಿದರು
ಅಫಜಲಪುರ ತಾಲ್ಲೂಕಿನ ರಾಮನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಸಂಯೋಜಕ ಗುರು ಜಮಾಲಪುರ ಚಾಲನೆ ನೀಡಿದರು   

ಅಫಜಲಪುರ: ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮುಖ್ಯವಾಗಿದೆ ಎಂದು ಜಿಲ್ಲಾ ಸಂಯೋಜಕ ಗುರು ಜಮಾಲಪುರ ತಿಳಿಸಿದರು.

ತಾಲ್ಲೂಕಿನ ರಾಮನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಅಫಜಲಪುರ ಆಶ್ರಯದಲ್ಲಿ ಕೆ.ಕೆ.ಆರ್‌.ಡಿ.ಬಿ. ಮೈಕ್ರೋ ಯೋಜನೆ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಗುರುಬಾಯಿ ಸಣದಾನಿ, ವಲಯ ಮೇಲ್ವಿಚಾರಕಿ ಮಲಕಮ್ಮ ನಿಂಬಾಳ, ಅಂಗನವಾಡಿ ಕಾರ್ಯಕರ್ತೆಯರಾದ ವನಮಾಲಾ, ಆಶಾಬಿ, ಜಗದೇವಿ ಹುಂಡೇಕಾರ, ಗೌರಾಬಾಯಿ ಡೊಂಬರ, ಶಾಕೇರಾ ಮುತವಲಿ, ಶಾರದಾ ಹಡಪದ, ಜಗದೇವಿ ಎಮ್ಮೆನವರ, ಸಾವಿತ್ರಿ ದುರ್ಗ, ಮಹಾದೇವಿ ಪತ್ತಾರ, ಶ್ರೀದೇವಿ ಅಟಪಟಕರ, ಸವಿತಾ, ವಿಜಯಲಕ್ಷ್ಮಿ ಸೇಜುಳೆ, ಶಾಂತಾಬಾಯಿ, ಶಿವಲೀಲಾ, ಜಯಶ್ರೀ ಪಾಟೀಲ
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.