ಕಲಬುರಗಿ: ನಗರದ ರಾಮಮಂದಿರ ವೃತ್ತದ ಬಳಿ ಮಂಗಳವಾರ ಸಂಜೆ ಲಾರಿ ಹಾಯ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಸಿರನೂರ ಗ್ರಾಮದ ಅಂಬವ್ವ ಕುಂಬಾರ (59) ಮೃತರು. ನಾಗನಹಳ್ಳಿ ಕ್ರಾಸ್‌ನಿಂದ ಬಂದ ಲಾರಿ ಜೇವರ್ಗಿಯತ್ತ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ರಸ್ತೆ ಬಳಿ ನಿಂತಿದ್ದ ಅಂಬವ್ವ ಅವರಿಗೆ ಹಿಂದಿನ ಚಕ್ರ ಹಾಯ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ರಾಮಲಿಂಗ ಮಾಧವರಾವ್ ಎಂಬುವನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.