
ಪ್ರಜಾವಾಣಿ ವಾರ್ತೆ
ಚಿಂಚೋಳಿ: ತಾಲ್ಲೂಕಿನ ನಿಡಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲಾಗಿದ್ದು ನಾಫೆಡ್‌ನ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಮಾರಾಟಕ್ಕಾಗಿ ರೈತರಿಂದ ನೋಂದಣಿ ಪ್ರಾರಂಭವಾಗಿದೆ’ ಎಂದು ಸಂಘದ ಅಧ್ಯಕ್ಷ ಮುಕುಂದ ದೇಶಪಾಂಡೆ ತಿಳಿಸಿದ್ದಾರೆ.
ಪ್ರತಿ ಕ್ವಿಂಟಲ್‌ಗೆ ₹ 8ಸಾವಿರ ದರದಲ್ಲಿ ತೊಗರಿ ಖರೀದಿಸಲಾಗುತ್ತಿದ್ದು, ಎಕರೆಗೆ 4 ಕ್ವಿಂಟಲ್‌ನಂತೆ ಮಾತ್ರ ರೈತರಿಂದ ತೊಗರಿ ಖರೀದಿಸಲಾಗುವುದು ಎಂದರು.
‘ಪ್ರಯುಕ್ತ ರೈತರು ಸಂಘದ ಕಚೇರಿಗೆ ಆಧಾರ ಕಾರ್ಡ ತೆಗೆದುಕೊಂಡು ಬಂದು ಬೆರಳಚ್ಚು (ಬಯೋ ಮೆಟ್ರಿಕ್) ನೀಡಿ ತೋಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.