ADVERTISEMENT

ಕಲಬುರಗಿ: ಶೌಚ ಗುಂಡಿ ಶುಚಿಗೊಳಿಸುವ ವೇಳೆ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 15:48 IST
Last Updated 18 ಫೆಬ್ರುವರಿ 2026, 15:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ನಗರದ ಹೀರಾಪುರ ಪ್ರದೇಶ ರೈಲ್ವೆ ಬ್ರಿಡ್ಜ್‌ ಬಳಿಯ ಮಾದರಸನ ಹಳ್ಳಿಯಲ್ಲಿ ಮನೆಯ ಶೌಚದ ಗುಂಡಿ‌‌ ಶುಚಿಗೊಳಿಸುವ ವೇಳೆ ಕೂಲಿ ಕಾರ್ಮಿಕ, ಅವರ ರಕ್ಷಣೆಗೆ ಹೋದ ಮನೆ ಮಾಲೀಕ ಉಸಿರುಗಟ್ಟಿ ಬುಧವಾರ ಮೃತಪಟ್ಟಿದ್ದಾರೆ‌.

ಮಾದರಸನ ಹಳ್ಳಿ ನಿವಾಸಿ, ಮನೆ ಮಾಲೀಕ ಶಿವಕುಮಾರ ಕಾಶೀನಾಥ್ ‌ನಂದೂರಕರ್‌ (52) ಹಾಗೂ ಕಲಬುರಗಿಯ ಇಂದಿರಾ ನಗರದ ನಿವಾಸಿ ರತನ್ ಭುಜಂಗರಾವ ಹೋಟಕರ್‌ (60) ಮೃತರು.

ADVERTISEMENT

ಶಿವಕುಮಾರ ಹಾಗೂ ರತನ್‌ ಇಬ್ಬರೂ ಸ್ನೇಹಿತರು. ಕೂಲಿ ಕೆಲಸ ಮಾಡುತ್ತಿದ್ದರು. ಮನೆಯ ಶೌಚಗುಂಡಿ ಶುಚಿತ್ವಕ್ಕೆ ಶಿವಕುಮಾರ ಅವರನ್ನು ಕರೆದಿದ್ದರು. ಗುಂಡಿಯ ಆಳಕ್ಕೆ ಇಳಿದಾಗ ಅವಗಢ ಸಂಭವಿಸಿದೆ.

ಕಾಶೀನಾಥ್ ಅವರ ರಕ್ಷಣೆಗೆ ಧಾವಿಸಿದ್ದ ಚೇತನ್ ಎಂಬವರನ್ನು ಸುತ್ತಲಿನ ಜನರು ರಕ್ಷಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.