ಚಿಂಚೋಳಿಯ ಬಂಜಾರಾ ಭವನದಲ್ಲಿ ಮಂಗಳವಾರ ನಡೆದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಶಾಸಕ ಡಾ.ಅವಿನಾಶ ಜಾಧವ ಉದ್ಘಾಟಿಸಿದರು
ಚಿಂಚೋಳಿ: ‘ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮ ಎಂಬ ಖ್ಯಾತಿ ಹೊಂದಿರುವ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಅತ್ಯಂತ ಸೂಕ್ತವಾದ ಚಿಂಚೋಳಿ ವನ್ಯಜೀವಿ ಧಾಮದ ಸೌಂದರ್ಯ ನಾಡಿಗೆ ಪರಿಚಯಿಸುವ ಕೆಲಸವನ್ನು ಛಾಯಾಗ್ರಾಹಕರು ಮಾಡಬೇಕು’ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.
ಇಲ್ಲಿನ ಚಂದಾಪುರದ ಬಂಜಾರಾ ಭವನದಲ್ಲಿ ತಾಲ್ಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಫೋಟೊಗ್ರಾಪರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎ.ಎಂ ಮುರುಳಿ, ‘ಚಿಂಚೋಳಿಯಲ್ಲಿ ಛಾಯಾ ಗ್ರಾಹಕರಿಗಾಗಿ ಸಮುದಾಯ ಭವನ ಮಂಜೂರು ಮಾಡಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.
ಚಿಂಚೋಳಿ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾತನಾಡಿ, ‘ಪ್ರಸಕ್ತ ವರ್ಷ ರಕ್ತದಾನ ಶಿಬಿರದ ಮೂಲಕ ಮೊದಲ ಕಾರ್ಯಕ್ರಮ ಅರ್ಥಪೂರ್ಣವಾಗಿ ಕೈಗೊಂಡಿದ್ದೇವೆ. ಮುಂದಿನ ವರ್ಷ ನೇತ್ರದಾನ ಹಮ್ಮಿಕೊಳ್ಳಲಾಗುವುದು’ ಎಂದರು.
ತಹಶೀಲ್ದಾರ್ ವೆಂಕಟೇಶ ದುಗ್ಗನ್, ಕಂದಾಯ ನಿರೀಕ್ಷಕ ರವಿ ಪಾಟೀಲ, ಡಾ. ಸಂತೋಷ ಪಾಟೀಲ, ಕಾಶಿನಾಥ ಧನ್ನಿ, ಜಿ.ಪಂ. ಮಾಜಿ ಸದಸ್ಯ ಜಗಜೀವನರಡ್ಡಿ ಪಾಟೀಲ ಮಿರಿಯಾಣ, ಶರಣು ಪಾಟೀಲ, ಗೌತಮ ಬೊಮ್ಮನಳ್ಳಿ, ಗೋಪಾಲರಾವ್ ಕಟ್ಟಿಮನಿ, ಕೆ.ಎಂ.ಬಾರಿ, ವಿಜಯಕುಮಾರ ಚೇಂಗಟಿ, ಸಂತೋಷ ಗಡಂತಿ, ಮಲ್ಲಿಕಾರ್ಜುನ ಪಾಲಾಮೂರ, ರಾಹುಲ್ ಯಾಕಾಪುರ, ಮಲ್ಲಿಕಾರ್ಜುನ ತುಪ್ಪದ, ವಿಜಯಕುಮಾರ ರಾಠೋಡ್, ಮಹಾದೇವಪ್ಪ, ಪವನಸಿಂಗ ಠಾಕೂರ, ಜಗನ್ನಾಥ ಡಿ. ಶೇರಿಕಾರ, ಬಸವರಾಜ ತೋಟದ, ಉಮೇಶ, ಪ್ರಕಾಶ ಜಂಗಲೆ, ಗಣಪತಿ, ಮಲ್ಲಿಕಾರ್ಜುನ, ಸಿದ್ರಾಮಪ್ಪ, ವೀರಣ್ಣ, ರಾಮಕೃಷ್ಣ, ಅಂಬರೀಷ ಕಂದಿ, ಬಸವರಾಜ ಕೆರೋಳ್ಳಿ, ನಾಗರಾಜ ಮುತ್ತಟ್ಟಿ, ಇಸ್ಮಾಯಿಲ್ ಪಟೇಲ್, ಶ್ರೀಕಾಂತ, ಶರಣು ಜಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ ಅಧ್ಯಕ್ಷತೆವಹಿಸಿದ್ದರು. ಶಿವಬಸ್ಸಯ್ಯ ಮಠ ಸ್ವಾಗತಿಸಿದರು. ರಮೇಶ ಭುತಪೂರ ನಿರೂಪಿಸಿದರು. ಬಸವರಡ್ಡಿ ಮಕಾಸಿ ವಂದಿಸಿದರು.
36 ಮಂದಿ ರಕ್ತದಾನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ತಾಲ್ಲೂಕು ಆಡಳಿತ ಹಾಗೂ ಛಾಯಾಗ್ರಾಹಕರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಮತ್ತು ಓರ್ವ ಮಹಿಳೆ ಮತ್ತು ಪತ್ರಕರ್ತರು, ವೈದ್ಯರು ಸೇರಿ 36 ಮಂದಿ ಜಿಮ್ಸ್ ರಕ್ತನಿಧಿಗೆ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಫೋಟೊಗ್ರಾಪರ್ಸ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಚೆ ಅಫಘಾತ ವಿಮೆ ನೋಂದಣಿ, ತಾಲ್ಲೂಕಿನ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.