ಕಲಬುರ್ಗಿ: ಜಿಲ್ಲೆಯ ಸ್ಪರ್ಶಾ ನೀಲಂಗಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 443ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. 2017ರ ಪರೀಕ್ಷೆಯಲ್ಲಿ 805ನೇ ರ್‍ಯಾಂಕ್ ಪಡೆದಿದ್ದ ಸ್ಪರ್ಶಾ ಅವರು ಪ್ರಸ್ತುತ ಅಸ್ಸಾಂನಲ್ಲಿ ಐಆರ್‌ಟಿಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಪಿಯುಸಿವರೆಗೆ ಕಲಬುರ್ಗಿಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಸ್ಪರ್ಶಾ ನಂತರ ಬೆಂಗಳೂರಿನಲ್ಲಿ ಪದವಿ ಮುಗಿಸಿ ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು.
ಕಲಬುರ್ಗಿಯ ಡಾ.ಶರಣಪ್ಪ ನೀಲಂಗಿ ಹಾಗೂ ಪಾರ್ವತಿ ದಂಪತಿಯ ಪುತ್ರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.