ADVERTISEMENT

ಲಸಿಕಾ ಕ್ಯಾಂಪ್‌ ಪರಿಶೀಲಿಸಿದ ಸ್ನೇಹಲ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:33 IST
Last Updated 9 ಅಕ್ಟೋಬರ್ 2021, 16:33 IST
ಕಲಬುರಗಿ ನಗರದ ವಿವಿಧೆಡೆ ತೆರೆದ ಕೋವಿಡ್‌ ವ್ಯಾಕ್ಸಿನ್‌ ಮೆಗಾ ಕ್ಯಾಂಪ್‌ಗಳಿಗೆ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಶುಕ್ರವಾರ ಭೇಟಿ ನೀಡಿದರು
ಕಲಬುರಗಿ ನಗರದ ವಿವಿಧೆಡೆ ತೆರೆದ ಕೋವಿಡ್‌ ವ್ಯಾಕ್ಸಿನ್‌ ಮೆಗಾ ಕ್ಯಾಂಪ್‌ಗಳಿಗೆ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಶುಕ್ರವಾರ ಭೇಟಿ ನೀಡಿದರು   

ಕಲಬುರಗಿ: ನಗರದ ವಿವಿಧ ಬಡಾವಣೆಗಳಲ್ಲಿ ಆರಂಭಿಸಿದ ಕೋವಿಡ್‌ ವ್ಯಾಕ್ಸಿನ್‌ ಮೆಗಾ ಕ್ಯಾಂಪ್‌ಗಳಿಗೆ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಲಸಿಕಾಕರಣ ನಡೆಯುತ್ತಿರುವ ಸ್ಥಳದಲ್ಲಿ ನಿಯೋಜಿಸಿದ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ ಅವರು, ಸ್ವಯಂ ಪ್ರೇರಣೆಯಿಂದ ಬಾರದ ಜನರಿಗೆ ತಿಳಿವಳಿಕೆ ಮೂಡಿಸಿ ವ್ಯಾಕ್ಸಿನ್‌ ಹಾಕಬೇಕು ಎಂದು ಸಲಹೆ ನೀಡಿದರು.

ನಂತರ ವಲಯ ಕಚೇರಿ 1 ಮತ್ತು 3ರ ವ್ಯಾಪ್ತಿಯಲ್ಲಿನ ಮುಖ್ಯರಸ್ತೆ ಮತ್ತು ಒಳ ರಸ್ತೆಗಳನ್ನು ಪರಿಶೀಲಿಸಿದರು. ಅಲ್ಲಿ ಸಂಗ್ರಹಗೊಂಡಿದ್ದ ಘನತ್ಯಾಜ್ಯ ವಿಲೇವರಿ ಮಾಡುವಂತೆ ಸೂಚಿಸಿದ ಅವರು, ಕಂಟೇನರ್‌ಗಳು ಓಡಾಡಬೇಕಾದ ರೀತಿಯ ಬಗ್ಗೆಯೂ ತಿಳಿಸಿದರು. ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳದಲ್ಲಿದ್ದ ಆರೋಗ್ಯ ನಿರೀಕ್ಷಕರಿಗೆ ತಾಕೀತು ಮಾಡಿದರು.

ADVERTISEMENT

ಬಡಾವಣೆಯ ಜನರು ತಮ್ಮ ಮನೆ ಮುಂದಿನ ರಸ್ತೆ, ವೃತ್ತಗಳು, ಚರಂಡಿಗಳಲ್ಲಿ ಕಸ ಎಸೆಯಬಾರದು. ಇದು ಸ್ವಚ್ಛ ನಗರಕ್ಕೂ ಅಡ್ಡಿಯಾಗುವುದಲ್ಲೇ, ರೋಗಗಳಿಗೆ ಆಸ್ಪದ ನೀಡುತ್ತದೆ. ಡೆಂಗಿ, ಚಿಕೂನ್‌ ಗುಣ್ಯದಂಥ ರೋಗಗಳಿಂದ ದೂರ ಉಳಿಯಬೇಕಾದರೆ ಮನೆ ಸುತ್ತ ಸ್ವಚ್ಛತೆ ಕಾಪಾಡಬೇಕು ಎಂದೂ ಬಡಾವಣೆಯ ನಿವಾಸಿಗಳಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.