ADVERTISEMENT

ಕಲಬುರ್ಗಿಯಲ್ಲಿ ವೈಕುಂಠ ಏಕಾದಶಿ ಸಡಗರ

ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 9:54 IST
Last Updated 7 ಜನವರಿ 2020, 9:54 IST
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟರಮಣ, ಪದ್ಮಾವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು 
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟರಮಣ, ಪದ್ಮಾವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು    

ಕಲಬುರ್ಗಿ: ವೈಕುಂಠ ಏಕಾದಶಿ ಅಂಗವಾಗಿ ನಗರದಲ್ಲಿ ವೆಂಕಟೇಶ್ವರ–ಪದ್ಮಾವತಿ ದೇವಿಗೆ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ನಗರದ ನ್ಯೂ ರಾಘವೇಂದ್ರ ಕಾಲನಿ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವೈಕುಂಠ ದ್ವಾರದ ಮೂಲಕ ದರ್ಶನ ಪಡೆದರು.

ಬೆಳಿ ಜಾವದಿಂದಲೇ ಆರಂಭವಾದ ಕಾರ್ಯಕ್ರಮಗಳು ತಡರಾತ್ರಿವರೆಗೂ ನಡೆದವು. ಏಕಾದಶಿ ಪ್ರಯುಕ್ತ ಬಂದ ಭಕ್ತಾದಿಗಳಿಗೆ ಬಾಳೆ ಹಣ್ಣು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ADVERTISEMENT

ವಿಶ್ವಮಧ್ವ ಮಹಾಪರಿಷತ್ತಿನ ಅಡಿಯಲ್ಲಿ ವೆಂಕಟೇಶ್ವರ ದೇವಸ್ಥಾನ, ಶ್ರೀನಿವಾಸ ಜ್ಞಾನವಾಹಿನಿ, ಸತ್ಯಾನಂದ ಭಜನಾ ಮಂಡಳಿ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.

ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಪ್ರಥಮ, ದ್ವಿತೀಯ ಸ್ಕಂದಗಳ ಸಾರ, ಪಂ. ವಿನೋದಾಚಾರ್ಯ ಗಲಗಲಿ ತೃತೀಯ- ಚತುರ್ಥ, ಪಂ. ವೆಂಕಣ್ಣಾಚಾರ್ಯ ಪೂಜಾರ ಮಳಖೇಡ ಪಂಚಮ-ಷಷ್ಠ, ಪಂ. ಅಭಯಾಚಾರ್ಯ ಪಾಟೀಲ ಅವರಿಂದ ಸಪ್ತಮ–ಅಷ್ಠಮ, ಪಂ. ಪ್ರಸನ್ನಾಚಾರ್ಯ ಜೋಶಿ ಅವರು ನವಮ–ದಶಮ, ಪಂ. ದ್ವೈಪನಾಚಾರ್ಯ ಕೊಥಳಿ ಅವರು ಏಕಾದಶ–ದ್ವಾದಶ ಸ್ಕಂದಗಳ ಸಾರ ನಡೆಸಿಕೊಟ್ಟರು. ಪದ್ಮಾವತಿ, ಗೌರಿ, ಗುರುದತ್ತ, ವೈಭವಲಕ್ಷ್ಮಿ, ಪಾಂಡುರಂಗ ಹಾಗೂ ಪದ್ಮಶ್ರೀ ಭಜನಾ ಮಂಡಳಿಗಳಿಂದ ಭಜನೆ ಜರುಗಿದವು.

ಇಂದು ರಥೋತ್ಸವ:ಮುಕ್ಕೋಟಿ ದ್ವಾದಶಿ ನಿಮಿತ್ತ ಇದೇ 7ರಂದು ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ. ನಂತರ ವಿವಿಧ ಭಜನಾ ಮಂಡಳಿಯಿಂದ ಭಜನೆ, ಪ್ರವಚನ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.