ADVERTISEMENT

ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:22 IST
Last Updated 3 ಜನವರಿ 2026, 6:22 IST
ಚಿಂಚೋಳಿಯ ಚಂದಾಪುರದ ಹಾರಕೂಡ ಸೇವಾ ಸಮಿತಿ ಟ್ರಸ್ಟ್‌ ಸಂಚಾಲಿತ ಶಾಲೆಯ 34ನೇ ವಾರ್ಷಿಕೋತ್ಸವ ಹಾಗೂ ಪಿಯು ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಡೀನ್ ಲಕ್ಷ್ಮಿ ಪಾಟೀಲ ದಂಪತಿ ಹಾಗೂ ಅಲಗೂಡ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ ರಾಜೋಳೆ ಅವರಿಗೆ ‘ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ’ ಪ್ರಶಸ್ತಿಯನ್ನು ಚನ್ನವೀರ ಶಿವಾಚಾರ್ಯರು ಶುಕ್ರವಾರ ಪ್ರದಾನ‌ ಮಾಡಿದರು
ಚಿಂಚೋಳಿಯ ಚಂದಾಪುರದ ಹಾರಕೂಡ ಸೇವಾ ಸಮಿತಿ ಟ್ರಸ್ಟ್‌ ಸಂಚಾಲಿತ ಶಾಲೆಯ 34ನೇ ವಾರ್ಷಿಕೋತ್ಸವ ಹಾಗೂ ಪಿಯು ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಡೀನ್ ಲಕ್ಷ್ಮಿ ಪಾಟೀಲ ದಂಪತಿ ಹಾಗೂ ಅಲಗೂಡ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ ರಾಜೋಳೆ ಅವರಿಗೆ ‘ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ’ ಪ್ರಶಸ್ತಿಯನ್ನು ಚನ್ನವೀರ ಶಿವಾಚಾರ್ಯರು ಶುಕ್ರವಾರ ಪ್ರದಾನ‌ ಮಾಡಿದರು   

ಚಿಂಚೋಳಿ: ‘ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣ್ಕೆ ಮೌಲ್ಯ ಬರಬೇಕಾದರೆ ಸಂಸ್ಕಾರ ಅಗತ್ಯ. ಹಾರಕೂಡ ಶಿಕ್ಷಣ ಸಂಸ್ಥೆ ಸಂಸ್ಕಾರ ಭರಿತ ಶಿಕ್ಷಣ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ’ ಎಂದು ಡಿಡಿಪಿಯು ಸುರೇಶ ಅಕ್ಕಣ್ಣ ತಿಳಿಸಿದರು.

ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಸೇವಾ ಸಮಿತಿ ಟ್ರಸ್ಟ್‌ನ ಶಾಲೆಯ 34ನೇ ವಾರ್ಷಿಕೋತ್ಸವ ಮತ್ತು ಪಿಯು ಕಾಲೇಜಿನ ದಶಮಾನೋತ್ಸವ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಡೀನ್ ಲಕ್ಷ್ಮೀ ಪಾಟೀಲ ದಂಪತಿ ಮತ್ತು ಅಲಗೂಡ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ರಮೇಶ ರಾಜೋಳೆ ದಂಪತಿಗೆ ಕಲ್ಯಾಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ಟ್ರಸ್ಟ ಅಧ್ಯಕ್ಷ ಚನ್ನವೀರ ಶಿವಾಚಾರ್ಯರು ಪ್ರದಾನ‌ ಮಾಡಿದರು.

ADVERTISEMENT

ಕ್ಷೇತ್ರಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ, ಆಡಳಿತಾಧಿಕಾರಿ ನಾಗರಾಜ ಕಲಬುರಗಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ ಸೀಳಿನ್, ಮುಖಂಡರಾದ ವಿರೂಪಾಕ್ಷಪ್ಪ ಯಂಪಳ್ಳಿ, ಡಾ.ವಾಸುದೇವ ಕುಲಕರ್ಣಿ, ಬಸವರಾಜ ಐನೋಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಅಪ್ಪಣ್ಣ ಜನವಾಡ, ಬಸವರಾಜ ಪರಶೆಟ್ಟಿ, ಸಂಗಮೇಶ ಕನಕಟ, ಗೀತಾರಾಣಿ ಐನೋಳ್ಳಿ ಮೊದಲಾದವರು ಇದ್ದರು.

ರೇವಣಸಿದ್ದಯ್ಯ ಹಿರೇಮಠ ಕಲ್ಲೂರು ಪ್ರಾರ್ಥಿಸಿದರು. ಚನ್ನವೀರ ಸ್ವಾಗತಿಸಿದರು. ಸಂಗಮೇಶ ಕನಕಟ್ ನಿರೂಪಿಸಿದರು.

ಆಧುನಿಕ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ. ನಮ್ಮ‌ಮಕ್ಕಳಿಗೆ ಮಾನವೀಯ ಮೌಲ್ಯಗಳು ತಿಳಿಸಿಕೊಡಲು ಮಠ ಮಾನ್ಯಗಳಿಗೆ ಕರೆದೊಯ್ಯಬೇಕು. ಮೋಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಈಗ ಮೋಬೈಲನಿಂದ ವರ್ಷದಲ್ಲಿಯೇ ನವ ವಿವಾಹಿತರು ವಿಚ್ಛೇದನಕ್ಕಾಗಿ ಮೊರೆ ಹೋಗುತ್ತಿದ್ದಾರೆ.
–ಲಕ್ಷ್ಮೀ ಪಾಟೀಲ, ಡೀನ್ ಶರಣಬಸವ ವಿವಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.