ADVERTISEMENT

ದೈವಪ್ರೀತಿ, ಪಾಪಭೀತಿ ಅವಶ್ಯ

ಸಂಸ್ಕೃತ ವಿವಿಯ ಕುಲಪತಿ ಪ್ರೊ. ಗಿರೀಶ್ಚಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 20:24 IST
Last Updated 16 ಅಕ್ಟೋಬರ್ 2019, 20:24 IST
ಚಿಂಚೋಳಿ ತಾಲ್ಲೂಕು ಯಲಕಪಳ್ಳಿಯ ಅಮರೇಶ್ವರ ಮಠದ ಲಿಂ.ಶಾಂತಲಿಂಗ ಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರೊ.ಗಿರೀಶ್ಚಂದ್ರ ಅವರಿಗೆ ‘ವಿದ್ಯಾವಾರಿಧಿ’ ಮತ್ತು ಡಾ.ರಾಜಕುಮಾರ ಎ.ಕೆ ಅವರಿಗೆ ‘ಅಮರವೈದ್ಯ’ ಪ್ರಶಸ್ತಿಯನ್ನು ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಬುಧವಾರ ಪ್ರದಾನ ಮಾಡಿದರು
ಚಿಂಚೋಳಿ ತಾಲ್ಲೂಕು ಯಲಕಪಳ್ಳಿಯ ಅಮರೇಶ್ವರ ಮಠದ ಲಿಂ.ಶಾಂತಲಿಂಗ ಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರೊ.ಗಿರೀಶ್ಚಂದ್ರ ಅವರಿಗೆ ‘ವಿದ್ಯಾವಾರಿಧಿ’ ಮತ್ತು ಡಾ.ರಾಜಕುಮಾರ ಎ.ಕೆ ಅವರಿಗೆ ‘ಅಮರವೈದ್ಯ’ ಪ್ರಶಸ್ತಿಯನ್ನು ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಬುಧವಾರ ಪ್ರದಾನ ಮಾಡಿದರು   

ಚಿಂಚೋಳಿ: ‘ಪ್ರತಿಯೊಬ್ಬರಿಗೂ ದೈವಪ್ರೀತಿ, ಪಾಪಭೀತಿ ಮತ್ತು ಸಂಘನೀತಿ ಅತ್ಯಾವಶ್ಯಕ’ ಎಂದು ಬೆಂಗಳೂರಿನ ಸಂಸ್ಕೃತ ವಿವಿಯ ಕುಲಪತಿ ಪ್ರೊ. ಗಿರೀಶ್ಚಂದ್ರ ಬುಧವಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ಅಮರೇಶ್ವರ ಮಠದ ಲಿಂ. ಶಾಂತಲಿಂಗ ಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ‘ವಿದ್ಯಾವಾರಿಧಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ದೈವ ಭಕ್ತಿ ಇಲ್ಲದೇ ಹೋದರೆ ಪಾಪ ಕಾರ್ಯಗಳು ಹೆಚ್ಚಾಗುತ್ತವೆ. ಇದರಿಂದ ಅನ್ಯಾಯ, ಅತ್ಯಾಚಾರ, ದ್ವೇಷ, ಅಸೂಯೆಗಳು ಹೆಚ್ಚುತ್ತವೆ. ಆಗ ಸಮಾಜದಲ್ಲಿ ಸಂಘಟನೆ ಕೊರತೆ ಉಂಟಾಗಿ ಬಿಕ್ಕಟ್ಟು
ಸೃಷ್ಟಿಯಾಗಿ ದಿಕ್ಕೆಟ್ಟು ಹೋಗಬೇಕಾಗುತ್ತದೆ. ಹೀಗಾಗಿ ಎಲ್ಲರೂ ದೈವ ಪ್ರೀತಿ, ಪಾಪಭೀತಿ
ಮತ್ತು ಸಂಘನೀತಿ ಅನುಸರಿಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ಉತ್ತಮ ಸಂಸ್ಕಾರ ಹಾಗೂ ಹೃದಯವೈಶಾಲ್ಯತೆಗೆ ಕಲ್ಯಾಣ ಕರ್ನಾಟಕ ಮಾದರಿಯಾಗಿದೆ. ಇಂತಹ ಜನ ನಮ್ಮ ಕಡೆಗೆ ದೊರೆಯುವುದಿಲ್ಲ’ ಎಂದರು.

ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ. ರಾಜಕುಮಾರ ಎ.ಕೆ ಅವರಿಗೆ ‘ಅಮರ ವೈದ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ‘ಚಿಂಚೋಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿ ತೋರಿಸು
ತ್ತೇನೆ’ ಎಂದರು.

ಭರತನೂರಿನ ಚಿಕ್ಕಗುರುನಂ ಜೇಶ್ವರರು, ತ್ರಿಮೂರ್ತಿ ಶಿವಾಚಾರ್ಯರು, ಸಿದ್ಧಾನಂದ ಶಿವಯೋಗಿಗಳು, ಬಣಮಿಯ ರಾಚೋಟೇಶ್ವರ ಸ್ವಾಮಿ, ಅಮರೇಶ್ವರ ಮಠದ ಶಂಬುಲಿಂಗಯ್ಯ ಸ್ವಾಮಿ ಮಾತನಾಡಿದರು.

ಇದಕ್ಕೂ ಮೋದಲು ಶಾಂತಲಿಂಗೇಶ್ವರರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿ, ಸಹಸ್ರ ಬಿಲ್ವಾರ್ಚನೆ, ಭಜನೆ, ಅನ್ನದಾಸೋಹ ನಡೆಯಿತು.

ರೇವ ಣಸಿದ್ದಯ್ಯ ಸ್ವಾಮಿ ಮಠಪತಿ, ಚಂದ್ರಶೇಖರಯ್ಯ ಸ್ಥಾವರ ಮಠ, ಶಿವಕುಮಾರಸ್ವಾಮಿ, ನಾಗಪ್ಪ ಮಾಲಿ ಪಾಟೀಲ, ಸಿದ್ದಲಿಂಗಪ್ಪ ಪಸಾರ, ಜಯಶ್ರೀ ಬಸವರಾಜ ಸಜ್ಜನಶೆಟ್ಟಿ, ಸಿದ್ದಾರೆಡ್ಡಿ ಬೆಟಗೇರಿ, ವಿಜಯಕುಮಾರ ಪಾಟೀಲ, ರೇವಣಸಿದ್ದಪ್ಪ ಪಾಟೀಲ, ಕಾಳಪ್ಪ ಪಾಟೀಲ, ಸಿದ್ದಪ್ಪಗೌಡ ಪಾಟೀಲ, ಬಸವರಾಜ ಕೆರೋಳ್ಳಿ, ಸಿದ್ದಪ್ಪ ನಿಜಪನೋರ್, ಉಮೇಶ ನಾಗೂರು, ಸೋಮನಾಥರೆಡ್ಡಿ ಲಕನನೋರ್, ವೀರಣ್ಣ ಪಾಟೀಲ, ರವಿ ದುಬಾಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.