ಚಿಂಚೋಳಿ: ತಾಲ್ಲೂಕಿನ ಚೌಕಿತಾಂಡಾದ ಬಂಜಾರಾ ಕಲಾವಿದ ವೀರಶೆಟ್ಟಿ ರಾಠೋಡ್ ಅವರಿಗೆ ಬಸವಕಲ್ಯಾಣದ ಧರ್ಮಗುರು ತಪಸ್ವಿ ಸಂತ ರಾಮರಾವ್ ಮಹಾರಾಜ ಬಂಜಾರಾ ಸಮಾಜ ವಿಕಾಸ ಫೆಡರೇಷನ್ 2024ನೇ ಸಾಲಿನ ರಾಷ್ಟ್ರೀಯ ಬಂಜಾರಾ ರತ್ನ ಪ್ರಶಸ್ತಿಯನ್ನು ಈಚೆಗೆ ಪ್ರದಾನ ಮಾಡಿದೆ.
ಮಹಾರಾಷ್ಟ್ರದ ಪೌರಾದೇವಿಯ ಸಂತ ಪರಶುರಾಮ ಗುರು ರತನಸಿಂಗ್ ಮಹಾರಾಜ ಸಭಾ ಭವನದಲ್ಲಿ ಜ.11ರಂದು ನಡೆದ ಫೆಡರೇಷನ್‌ನ ಮೂರನೇ ವಾರ್ಷೀಕೋತ್ಸವದಲ್ಲಿ ಪ್ರಶಸ್ತಿಯನ್ನು ಪೌರಾದೇವಿ ಶಕ್ತಿಪೀಠದ ಬಾಬುಸಿಂಗ್ ಮಹಾರಾಜ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪೌರಾದೇವಿಯ ಜೀತೇಂದ್ರ ಮಹಾರಾಜ, ಆಂಧ್ರದ ದುರ್ಗಾದಾಸ ಮಹಾರಾಜ, ಹೈದರಾಬಾದ ಭೋಜುಸಿಂಗ್ ಮಹಾರಾಜ ಹಾಗೂ ಅರ್ಚನಾ ವಿಜಯ ರಾಠೋಡ್, ಅಭಿಷೇಕ್ ರಾಠೋಡ್, ವಿಜಯ ರಾಮಾವತ್, ಸಮಾಧಾನ ರಾಠೋಡ್, ಮಾವುಲಿ ರಾಠೋಡ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.