ADVERTISEMENT

ಕಲಬುರ್ಗಿ: ಆಂಬುಲೆನ್ಸ್, ಆಮ್ಲಜನಕ ಸಾಂದ್ರಕ ನೀಡಿದ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಮೇ 2021, 9:37 IST
Last Updated 30 ಮೇ 2021, 9:37 IST
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಳುಹಿಸಿರುವ ಉಚಿತ ಆಂಬುಲೆನ್ಸ್ ಹಾಗೂ ಆಮ್ಲಜನಕ ಸಾಂದ್ರಕಗಳೊಂದಿಗೆ ಶಿವರಾಜ ಪಾಟೀಲ ರದ್ದೇವಾಡಗಿ, ಸಿದ್ದಾಜಿ ಪಾಟೀಲ, ಪ್ರವೀಣ ತೆಗನೂರ ಇತರರು ಇದ್ದರು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಳುಹಿಸಿರುವ ಉಚಿತ ಆಂಬುಲೆನ್ಸ್ ಹಾಗೂ ಆಮ್ಲಜನಕ ಸಾಂದ್ರಕಗಳೊಂದಿಗೆ ಶಿವರಾಜ ಪಾಟೀಲ ರದ್ದೇವಾಡಗಿ, ಸಿದ್ದಾಜಿ ಪಾಟೀಲ, ಪ್ರವೀಣ ತೆಗನೂರ ಇತರರು ಇದ್ದರು   

ಕಲಬುರ್ಗಿ: ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಜಿಲ್ಲೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ‘ಮೈ ಸೇವಾ’ ತಂಡದ ಮೂಲಕ ಒಂದು ಆಂಬುಲೆನ್ಸ್ ಮತ್ತು ಐದು ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಟ್ಟಿದ್ದಾರೆ.

ಭಾನುವಾರದಿಂದಲೇ ಆಂಬುಲೆನ್ಸ್ ಹಾಗೂ ಆಮ್ಲಜನಕ ಸಾಂದ್ರಕಗಳು ಸೇವೆಗೆ ಲಭ್ಯವಾಗಿವೆ. ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ ತಿಳಿಸಿದ್ದಾರೆ.

ಆಂಬುಲೆನ್ಸ್ ಸೇವೆ ‍ಪಡೆಯಲು ಶರಣು ಸಜ್ಜನಶೆಟ್ಟಿ (99861 76909), ಆಮ್ಲಜನಕ ಸಾಂದ್ರಕ ಪಡೆಯಲು ಡಾ.ಶಂಭು ಪಾಟೀಲ (99165 42222) ಅವರನ್ನು ಸಂಪರ್ಕಿಸಬಹುದು ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ತಿಳಿಸಿದ್ದಾರೆ.

ADVERTISEMENT

ಕಳೆದ ಲಾಕ್‌ಡೌನ್‌ನಲ್ಲಿ ಉಚಿತ ಔಷಧ ಸೇವೆಯನ್ನು ಜನರ ಮನೆಯ ಬಾಗಿಲಿಗೆ ತಲುಪಿಸಿದ ತಂಡವೇ ಈ ಬಾರಿಯೂ ಯಶಸ್ವಿಯಾಗಿ ನಿಭಾಯಿಸುತ್ತದೆ ಎಂದು ಹೇಳಿದರು.

ಮುಖಂಡರಾದ ವಿಶಾಲ ದರ್ಗಿ, ಮಹಾದೇವ ಬೆಳಮಗಿ, ಸೂರಜ್ ತಿವಾರಿ, ಸೋಮು ಅಣವೀರ ಪಾಟೀಲ, ಅಂಬರೀಶ್ ಮೇತ್ರಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.