
ಆಳಂದ: ‘ನಮ್ಮ ಗ್ರಾಮೀಣ ಭಾಗದ ಯುವಕರು ಐಷಾರಾಮಿ ಜೀವನ ಶೈಲಿಗೆ ಆಕರ್ಷಿತರಾಗದೇ ಕಾಯಕ ಮತ್ತು ಸಹಕಾರ ತತ್ವ ರೂಡಿಸಿಕೊಂಡರೆ ಮಾತ್ರ ಗ್ರಾಮದ ಪ್ರಗತಿ ಸಾಧ್ಯವಿದೆ’ ಎಂದು ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದಲ್ಲಿ ಮಂಗಳವಾರಲಬುರಗಿ, ಬೀದರ ಹಾಗೂ ಯಾದಗರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ನೇತೃತ್ವದಲ್ಲಿ ಕೈಗೊಂಡ ಗ್ರಾಮ ಸ್ವರಾಜ್ಯ ಪಾದಯಾತ್ರೆಯ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಆರ್ .ಕೆ.ಪಾಟೀಲ ಮಾತನಾಡಿ ಮುಂಬೈ, ‘ಪುಣೆ, ಬೆಂಗಳೂರು ಅಂತಹ ದೊಡ್ಡ ಪಟ್ಟಣಗಳಲ್ಲಿ ದುಡಿಯುವ ನಮ್ಮ ಯುವಕರೂ ಆರ್ಥಿಕವಾಗಿ ಅಭದ್ರತೆ ಕಾಡುತ್ತಿದೆ, ತಮ್ಮ ಗ್ರಾಮದಲ್ಲಿಯೂ ಹೈನುಗಾರಿಕೆ, ತರಕಾರಿ, ತೋಟಗಾರಿಕೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಮುಂದೆ ಬಂದರೆ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದರು.
ಕಿಣಿಸುಲ್ತಾನದ ಹಿರೇಮಠನ ಪೀಠಾಧಿಪತಿ ಶಿವಶಾಂತಲಿಂಗ ಸ್ವಾಮೀಜಿ ಅಧ್ಯಕ್ಷತೆವಹಿಸಿದರು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಅರುಣಕುಮಾರ ಪಾಟೀಲ, ರಾಜು ಎಸ್ ಕಾಂತಾ, ಮುಖಂಡರಾದ ಶಿವಪುತ್ರಪ್ಪ ಪಾಟೀಲ, ಸಿದ್ದರಾಮ ಪ್ಯಾಟಿ, ಅಶೋಕ ಸಾವಳೇಶ್ವರ, ಈರಣ್ಣಾ ಝಳಕಿ, ಅಶೋಕ ಪಡಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ, ಭೀಮರಾವ ಬಳ್ತೆ, ಬಸವರಾಜ ಉಪ್ಪಿನ, ಬಸವರಾಜ ಪಾವಡಶೆಟ್ಟಿ, ರವಿ ದೇಗಾಂವ, ಸಿದ್ದಲಿಂಗ ಮಲಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೀದರನ ಯುವ ಗಾಯಕಿ ಶಿವಾನಿ ಹಿರೇಮಠ ಅವರ ಗಾಯನ ತಂಡದಿಂದ ಗಾಯನವು ಮನ ಸೆಳೆಯಿತು. ತುಂತುರು ಮಳೆಯಲ್ಲಿಯೇ ನೂರಾರೂ ಸಂಖ್ಯೆಯಲ್ಲಿ ಸೇರಿದ ಮಕ್ಕಳ, ಮಹಿಳೆಯರು ಹಾಗೂ ಯುವಕರೂ ಶಿವಾನಿ ಹಾಡಿಗೆ ಚಪ್ಪಾಳೆ ಹಾಕಿ ದ್ವನಿಗೂಡಿಸಿದರು. ವಿಶೇಷವಾಗಿ ಗುರುವೇ ನಿನ್ನಾಟ ಬಲ್ಲವರಾರೂ, ಗೊಂಬೆ ಹೇಳುತೈತ್ತಿ ನಿನ್ನೆ ರಾಜಕುಮಾರ, ಒಳ್ಳಿತು ಮಾಡು ಮನುಸಾ,, ಹಾಡಿಗೆ ಮಳೆಯಲ್ಲಿ ಯುವಕರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿ ಕಿಟ್ ಉಚಿತವಾಗಿ ವಿತರಣೆ ಮಾಡಲಾಯಿತು. ಗ್ರಾಮದ ಮಾಜಿ ಸೈನಿಕರು, ವಿವಿಧ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ನೌಕರರೂ ಮತ್ತು ಕಲಾವಿದರನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ ವಿವಿಧ ಗ್ರಾಮದಿಂದ ಅಧಿಕ ಸಂಖ್ಯೆಯಲ್ಲಿ ಜನರು ಪಾಳ್ಗೋಂಡಿದರು. ಪಾದಯಾತ್ರೆಯು ತಲೆಕುಣಿ ಮಾರ್ಗದಿಂದ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಅಭಿಮಾನಿಗಳು ಪಾದಯಾತ್ರೆಯನ್ನು ಸ್ವಾಗತಿಸಿದರು. ಜಾಗೃತಿ ನಾಟಕ, ಕಲಾವಿದರ ತಂಡದಿಂದ ಗಾಯನ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.