ವಾಡಿ: ಪಟ್ಟಣದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಅನಾಥ ಮಕ್ಕಳಿಗೆ ಈಚೆಗೆ ಮಾಸಾಶನ ವಿತರಿಸಲಾಯಿತು.
ಸೆ. 13ರ ‘ಪ್ರಜಾವಾಣಿ’ ಪತ್ರಿಕೆಯ ಸುದ್ದಿ ಉಲ್ಲೇಖಿಸಿ ಮಾಸಾಶನ ಮಂಜೂರಿಗೆ ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಇಬ್ಬರ ಪೈಕಿ ಬಾಲಕಿ ಭಾಗ್ಯಶ್ರೀಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯ ಅಡಿಯಲ್ಲಿ ಮಾಸಿಕ ₹1500 ಮಂಜೂರುಗೊಳಿಸಿದೆ.
ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅರ್ಚನಾ ಕುಲಗುಡೆ ಮಾತನಾಡಿ, ‘ಈಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಅನಾಥ ಮಕ್ಕಳ ಕುರಿತಾಗಿ ಸುದ್ದಿ ಪ್ರಕಟಗೊಂಡಿದ್ದು, ಮಕ್ಕಳ ಕನಿಷ್ಠ ಅಗತ್ಯ ಪೂರೈಕೆಗೆ ನಮ್ಮ ಸಂಸ್ಥೆ ಮುಂದಾಗಿದೆ. ಅದಕ್ಕಾಗಿ ಪ್ರತಿ ತಿಂಗಳು ಮಾಸಾಶನ ವಿತರಿಸುತ್ತಿದೆ’ ಎಂದು ತಿಳಿಸಿದರು.
ವಾಡಿ ವಲಯದ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ, ಸಂಸ್ಥೆಯ ಸೇವಾದಾರರಾದ ಮಲ್ಲಮ್ಮ ರೆಡ್ಡಿ, ಸಹಾಯಕಿ ಶರಣಮ್ಮ ಪಾರಾ, ರಾಜು ಒಡೆಯರಾಜ, ಮಲ್ಲಿಕಾರ್ಜುನ ಪೂಜಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.