ADVERTISEMENT

ಭಂಕೂರಿನಲ್ಲಿ ಡಿಸಿಗೆ ಆತ್ಮೀಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 8:31 IST
Last Updated 18 ಜೂನ್ 2022, 8:31 IST
ಭಂಕೂರಿನಲ್ಲಿ ಡಿಸಿಗೆ ಆತ್ಮೀಯ ಸ್ವಾಗತ
ಭಂಕೂರಿನಲ್ಲಿ ಡಿಸಿಗೆ ಆತ್ಮೀಯ ಸ್ವಾಗತ   

ಕಲಬುರಗಿ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಪ್ರಯುಕ್ತ ಗ್ರಾಮಸ್ಥರ ಅಹವಾಲು ಆಲಿಸಲು
ಶಹಾಬಾದ್ ತಾಲ್ಲೂಕಿನ ಭಂಕೂರ ಗ್ರಾಮಕ್ಕೆ ಶನಿವಾರ ಭೇಟಿ‌ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

ಲಂಬಾಣಿ ಮಹಿಳೆಯರ ನೃತ್ಯ ಪ್ರದರ್ಶಿಸಿದರೆ, ಶಾಲಾ ಮಕ್ಕಳು ಡೊಳ್ಳು, ಹಲಗೆ ಬಾರಿಸಿದರು.
ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಆರತಿ ಬೆಳಗಿ, ಸಂಪ್ರದಾಯಿಕವಾಗಿ ಗ್ರಾಮಕ್ಕೆ ಸ್ವಾಗತ ಕೋರಿದರು.

ಜಿಲ್ಲಾಧಿಕಾರಿ ಅವರನ್ನು ಎತ್ತಿನ ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ಕರೆತರಲಾಯಿತು

ADVERTISEMENT

ಜಿಲ್ಲಾಧಿಕಾರಿಯವರು ಶ್ರೀ ಕೇರಿಯಮ್ಮ ದೇವಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು.

ಜಿಲ್ಲಾಧಿಕಾರಿಯ ಜೊತೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಡಿ. ಬದೋಲೆ ಅವರು
ಭಂಕೂರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ
ವಸ್ತು ಪ್ರದರ್ಶನ ಹಾಗೂ ಭಂಕೂರು ಗ್ರಾಮದ ಐತಿಹಾಸಿಕ ಚಿತ್ರಣಗಳು ವೀಕ್ಷಿಸಿದರು.

ಶಹಾಬಾದ್ ತಹಶೀಲ್ದಾರ್ ಸುರೇಶ ವರ್ಮಾ, ಗ್ರೇಡ್ ತಹಸೀಲ್ದಾರ ಗುರುರಾಜ ಸಂಗಾವಿ,
ಉಪ ತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ, ಶಿರಸ್ತೇದಾರ ರವಿಕುಮಾರ, ಶಿರಸ್ತೇದಾರ ಸ್ಯೆಯದ್ ಹಾಜಿ,
ಕ್ಷೇತ್ರ ಶಿಕ್ಷಣಧಿಕಾರಿ
ಆರ್. ಐ ಹಣಮಂತರಾವ, ತಾಲ್ಲೂಕು ಆರೋಗ್ಯಧಿಕಾರಿ, ಶಹಾಬಾದ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.