ADVERTISEMENT

‘ಸಂಶೋಧನೆಯಿಂದ ಮಹತ್ತರ ಬದಲಾವಣೆ’

ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 15:40 IST
Last Updated 24 ಆಗಸ್ಟ್ 2019, 15:40 IST
ಪಿ.ಡಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಸಿರಾಮಿಕ್‌ ಮತ್ತು ಸಿಮೆಂಟ್‌ ಟೆಕ್ನಾಲಜಿ ವಿಭಾಗವು ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಡಾ.ಬಲರಾಮ ಸಾಹು, ಡಾ. ನಾಗೇಂದ್ರ ಮಂಠಾಳೆ, ಉದಯಕುಮಾರ ಎಸ್.ಚಿಂಚೋಳಿ, ಡಾ.ಶರಣಬಸಪ್ಪಾ ಕಾಮರೆಡ್ಡಿ, ಡಾ.ಎಸ್‌.ಎಸ್‌.ಹೆಬ್ಬಾಳ, ಪ್ರೊ. ಶರಣ ಪಡಶೆಟ್ಟಿ, ಪ್ರೊ. ಬಾಬುರಾವ್‌ ಶೇರಿಕಾರ ಇತರರು ಇದ್ದರು
ಪಿ.ಡಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಸಿರಾಮಿಕ್‌ ಮತ್ತು ಸಿಮೆಂಟ್‌ ಟೆಕ್ನಾಲಜಿ ವಿಭಾಗವು ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಡಾ.ಬಲರಾಮ ಸಾಹು, ಡಾ. ನಾಗೇಂದ್ರ ಮಂಠಾಳೆ, ಉದಯಕುಮಾರ ಎಸ್.ಚಿಂಚೋಳಿ, ಡಾ.ಶರಣಬಸಪ್ಪಾ ಕಾಮರೆಡ್ಡಿ, ಡಾ.ಎಸ್‌.ಎಸ್‌.ಹೆಬ್ಬಾಳ, ಪ್ರೊ. ಶರಣ ಪಡಶೆಟ್ಟಿ, ಪ್ರೊ. ಬಾಬುರಾವ್‌ ಶೇರಿಕಾರ ಇತರರು ಇದ್ದರು   

ಕಲಬುರ್ಗಿ: ಆಧುನಿಕ ಜಗತ್ತಿನ ವಿಸ್ಮಯಗಳಾದ ಸ್ಮಾರ್ಟ್‌ಫೋನ್, ದೂರದರ್ಶನ, ಕಂಪ್ಯೂಟರ್‌ನಲ್ಲಿ ಆಗುತ್ತಿರುವ ಬದಲಾವಣೆಗೆ ವಸ್ತುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಯೇ ಮೂಲಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕ ಡಾ.ಬಲರಾಮ ಸಾಹು ಅಭಿಪ್ರಾಯಪಟ್ಟರು.

ಇಲ್ಲಿನ ಪಿ.ಡಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಸಿರಾಮಿಕ್‌ ಮತ್ತು ಸಿಮೆಂಟ್‌ ಟೆಕ್ನಾಲಜಿ ವಿಭಾಗವು ‘ವಸ್ತುಗಳ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ವಿಷಯದ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗೌರವ ಅತಿಥಿಯಾಗಿದ್ದ ಪೋರ್ಚುಗಲ್‌ನ ಬ್ರಾಗ್‌ ಮೂಲದ ಐಬೇರಿಯನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಭಾರತೀಯ ಮೂಲದ ಡಾ. ಪುರಷೋತ್ತಮ ಜೋಶಿ ನ್ಯಾನೊ ಕಣಗಳು ಮತ್ತು ನ್ಯಾನೊ ವಸ್ತುಗಳ ಸಮಗ್ರ ಮಾಹಿತಿ ಒದಗಿಸಿದರು.

ADVERTISEMENT

ಉಗಾಂಡಾ ಮೂಲದ ವಿಜ್ಞಾನಿ ಇನ್-ಯಾ-ಲೋಟ್ ಜೂಡ್ ಟ್ಯಾಡಿಯೊ ಅವರು ಸ್ಮಾರ್ಟ್‌ ವಿಂಡೊ ವಸ್ತುಗಳ ಮೇಲೆ ಪ್ರಬಂಧವನ್ನು ಮಂಡಿಸಿದರು.

ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಸಹಪ್ರಾಧ್ಯಾಪಕ ಡಾ. ಶ್ರೀಕಾಂತ ಅವರು ಎಕ್ಸ್‌ಪೆರಿಮೆಂಟಲ್ ಡೇಟಾ ಅನಾಲಿಸಿಸ್‌ ಬಗ್ಗೆ ಪ್ರಬಂಧವನ್ನು ಮಂಡಿಸಿದರು. ಪಿಡಿಎ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಂಶೋಧಕ ಮಹಮ್ಮದ್‌ ಅಜ್ಞಾನ ಹಸನ್ ಬಾಹ್ಯಾಕಾಶ ಉಪಗ್ರಹದ ಉಷ್ಣತಾ ನಿರ್ವಹಣೆ ಬಗ್ಗೆ ಮಾಹಿತಿ ಒದಗಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಸ್.ಹೆಬ್ಬಾಳ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ವಿವಿಧ ತಾಂತ್ರಿಕ ಯೋಜನೆಗಳನ್ನು ಅಯೋಜಿಸಿದ್ದು ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಮಾಡಬೇಕು ಎಂದರು.

ಸಿರಾಮಿಕ್‌ ಮತ್ತು ಸಿಮೆಂಟ್ ಟೆಕ್ನಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಸ್ವಾಗತಿಸಿರು. ಮುಖ್ಯಸ್ಥ ಡಾ. ಅಮರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಡಾ. ಶ್ರೀಧರ ಪಾಂಡೆ ವಿಚಾರ ಸಂಕಿರಣದ ಮಹತ್ವ ವಿವರಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪವನ ರಂಗದಾಳ ವಂದಿಸಿದರು. ಭುವನೇಶ್ವರಿ ಮತ್ತು ನಿಖಿ ವೈದ್ಯ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಟೆಕ್ಯುಪ್‌ 3 ರ ಸಂಚಾಲಕ ಪ್ರೊ. ಶರಣ ಪಡಶೆಟ್ಟಿ, ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ನಾಗೇಂದ್ರ ಮಂಠಾಳೆ, ಆಡಳಿತ ಮಂಡಳಿ ಸದಸ್ಯರಾದ ಉದಯಕುಮಾರ ಎಸ್.ಚಿಂಚೋಳಿ, ಡಾ.ಶರಣಬಸಪ್ಪಾ ಕಾಮರೆಡ್ಡಿ ವೇದಿಕೆಯಲ್ಲಿದ್ದರು.

ವಿಭಾಗದ ಡಾ. ಜಾನ್ ಯು. ಕೆನಡಿ, ಡಾ.ಮಹಾದೇವಪ್ಪ ಗಾದಗೆ, ಡಾ. ಎಸ್.ಬಿ.ಪಾಟೀಲ, ಪ್ರೊ. ವೀರೇಶ ಮಲ್ಲಾಪೂರ, ಪ್ರೊ. ಗುಂಡು ಕೋಳಕೂರ, ಪ್ರೊ. ಹಂಸರಾಜ್ ಸಾಹು, ಮಲ್ಲಿಕಾರ್ಜುನ ಕುಮನೆ, ಶರಣು ಜಗತೆ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರೊ. ವಿ.ಎಸ್. ಜಾಲಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.