ADVERTISEMENT

ಯಡ್ರಾಮಿ ಇನ್ನು ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 5:22 IST
Last Updated 9 ನವೆಂಬರ್ 2020, 5:22 IST
ಶಹಾಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮದ ಭೀಮ ನಗರ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಉಪತಹಶೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಶಹಾಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮದ ಭೀಮ ನಗರ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಉಪತಹಶೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಯಡ್ರಾಮಿ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯಡ್ರಾಮಿ ಗ್ರಾಮ ಪಂಚಾಯಿತಿ ಪ್ರದೇಶವನ್ನು ಸೆಪ್ಟೆಂಬರ್ 11ರಂದು ಪರಿವರ್ತನಾ ಪ್ರದೇಶವೆಂದು ಉದ್ಘೋಷಿಸಿ ಪರಿವರ್ತನಾ ಯಡ್ರಾಮಿ ಪಟ್ಟಣ ಪಂಚಾಯಿತಿ ಪ್ರದೇಶವೆಂದು ಪದನಾಮೀಕರಿಸಿ ಘೋಷಿಸಲಾಗಿದೆ.

ಯಡ್ರಾಮಿ ಮೇಲ್ದರ್ಜೆಗೇರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ 11.35 ಚ.ಕಿ.ಮೀ. ಪೂರ್ವಕ್ಕೆ ಯಡ್ರಾಮಿ ಗ್ರಾಮವು ಜೇವರ್ಗಿ ಮತ್ತು ಚಿಗರಹಳ್ಳಿ ಮುಖ್ಯರಸ್ತೆಯ ಮೇಲೆ ನಿರ್ಮಾಣವಾಗಿದ್ದು ಸರ್ವೆ ನಂ.442/1 ಅಖಂಡಹಳ್ಳಿ ಗ್ರಾಮಕ್ಕೆ ಹೋಗುವ ದಕ್ಷಿಣಾಭಿಮುಖವಾಗಿ ಸರ್ವೆ ನಂ.442/1ರವರೆಗೆ ಮತ್ತು ಸ.ನಂ 442, 441, 440 ಕೂಡ ಒಳಗೊಂಡಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.