ADVERTISEMENT

ಯಡ್ರಾಮಿ ಪಟ್ಟಣಕ್ಕೆ ಜ.12ರಂದು ಸಿಎಂ ಆಗಮನ: ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:19 IST
Last Updated 9 ಜನವರಿ 2026, 6:19 IST
ಯಡ್ರಾಮಿ ಪಟ್ಟಣದ ಪಬ್ಲಿಕ್ ಶಾಲೆ ಆವರಣವನ್ನು ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು 
ಯಡ್ರಾಮಿ ಪಟ್ಟಣದ ಪಬ್ಲಿಕ್ ಶಾಲೆ ಆವರಣವನ್ನು ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು    

ಯಡ್ರಾಮಿ: ಪಟ್ಟಣಕ್ಕೆ ಜ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಅಂದು ನೂತನ ತಾಲ್ಲೂಕುಗಳ ವಿಧಾನಸೌಧ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ 300 ಕೆಪಿಎಸ್ ಶಾಲೆಗಳ ಘೋಷಣೆ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಸ್ಥಳ ಹಾಗೂ ಸಾರ್ವಜನಿಕರ ಊಟದ ಸ್ಥಳ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಕಾರ್ಯಕ್ರಮ ನಡೆಯಲಿರುವ ಪಬ್ಲಿಕ್ ಶಾಲೆ ಆವರಣವನ್ನು ಪರಿಶೀಲಿಸಿದರು. ಸಮಾರಂಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ADVERTISEMENT

ಈ ವೇಳೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ಯಾಮ ಭಜಂತ್ರಿ, ಪಿಎಸ್‌ಐ ವಿಶ್ವನಾಥ್ ಮುದರಡ್ಡಿ, ಚಂದ್ರಶೇಖರ ಪುರಾಣಿಕ, ಚಿದಾನಂದ ಸೌದಿ, ಬಸವರಾಜ ಪವಾರ್, ಚಿದಾನಂದ ಮಳೊಳ್ಳಿ, ಮಲ್ಲಿಕಾರ್ಜುನ್ ಹಲಕಟ್ಟಿ, ಸೀತಾರಾಮ್ ಪವಾರ ಅನೇಕರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.