ಚಿತ್ತಾಪುರ: ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ದೇವಸ್ಥಾನದ ಹುಂಡಿಯ ಹಣವನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಶನಿವಾರ ಎಣಿಕೆ ಮಾಡಿದರು. ಒಟ್ಟು ₹9.65 ಲಕ್ಷ ಹಣ ಹುಂಡಿಯಲ್ಲಿತ್ತು. ಕಂದಾಯ ಸಿಬ್ಬಂದಿ ಎಣಿಕೆ ಮಾಡಿದರು. ಬ್ಯಾಂಕ್ ಸಿಬ್ಬಂದಿ ಹಣ ಎಣಿಸಿಕೊಂಡು ದೇವಸ್ಥಾನದ ಹೆಸರಲ್ಲಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಕೊಂಡರು ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ತಿಳಿಸಿದರು.
ಕೊರೊನಾ ಸಂಕಷ್ಟದ ನಂತರ ಮೊದಲ ಬಾರಿಗೆ ದೇವಸ್ಥಾನದ ಹುಂಡಿ ತೆರಯಲಾಯಿತು. ಭಕ್ತರು ಹೆಚ್ಚಿನ ಹಣ ಹುಂಡಿಗೆ ಹಾಕಿದ್ದಾರೆ. ದೇವಿಯ ಜಾತ್ರೆ ರದ್ದಾಗಿದ್ದರಿಂದ ಹುಂಡಿಗೆ ಬರುತ್ತಿದ್ದ ಕಾಣಿಕೆ ಹಣ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.