ಗುಂಪು ಹಲ್ಲೆ
– ಗೆಟ್ಟಿ ಚಿತ್ರ
ಕಲಬುರಗಿ: ಹೊಸ ವರ್ಷಾಚರಣೆ ಸಡಗರದಲ್ಲಿ ಡಿ.31ರಂದು ರಾತ್ರಿ ನಡು ರಸ್ತೆಯಲ್ಲಿ ಮದ್ಯ ಕುಡಿಯುತ್ತ ನಿಂತಿದ್ದವರಿಗೆ ದಾರಿ ಬಿಟ್ಟು ನಿಲ್ಲುವಂತೆ ಹೇಳಿದ್ದ ಯುವಕರೊಬ್ಬರ ನಾಲ್ವರು ಕೈ ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ಉದನೂರ ಗ್ರಾಮಸ್ಥ ನಿರಾಜ್ ಚಿನ್ನಮಳ್ಳಿ ಹಲ್ಲೆಗೊಳಗಾದವರು.
‘ದಾರಿ ಬಿಟ್ಟು ನಿಲ್ಲುವಂತೆ ಹೇಳಿದ್ದಕ್ಕೆ ಹಲ್ಲೆ ನಡೆಸಿದರು. ಬಿಯರ್ ಬಾಟಲಿಯಿಂದ ತಲೆ ಹೊಡೆದರು. ಆಗ ಜೀವ ಬೆದರಿಕೆ ಹಾಕಿದರು. ಸ್ಥಳೀಯರು ಜಗಳ ಬಿಡಿಸಿದರು. ನಾವೂ ಹೊಲದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಜಗಳದ ಸ್ಥಳದಿಂದ ನಾನು ಹೊಲಕ್ಕೆ ಹೋದೆ. ರಾತ್ರಿ 12.30ರ ಹೊತ್ತಿಗೆ ಅಲ್ಲಿಗೂ ಬಂದ ನಾಲ್ವರು ಮತ್ತೆ ಹಲ್ಲೆ ನಡೆಸಿದರು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಿರಾಜ್ ಚಿನ್ನಮಳ್ಳಿ ತಿಳಿಸಿದ್ದಾರೆ.
ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪುಟ್ಟು ಪೂಜಾರಿ, ಬಸವರಾಜ ಪೂಜಾರಿ, ವಿಜಯಕುಮಾರ ಹುಗಾಡೆ, ಮಾಳಪ್ಪ ಕೋರಳ್ಳಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.