ADVERTISEMENT

ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಅನನ್ಯ ಕೊಡುಗೆ

ಬಾಡದಲ್ಲಿ ಕನಕದಾಸರ ಜಯಂತ್ಯುತ್ಸವ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 6:36 IST
Last Updated 4 ಡಿಸೆಂಬರ್ 2020, 6:36 IST
ಶಿಗ್ಗಾವಿ ತಾಲ್ಲೂಕಿನ ಕನಕನಬಾಡ ಗ್ರಾಮ ಅರಮನೆ ಆವರಣದಲ್ಲಿ ಗುರುವಾರ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಸರಳವಾಗಿ ಜರುಗಿತು
ಶಿಗ್ಗಾವಿ ತಾಲ್ಲೂಕಿನ ಕನಕನಬಾಡ ಗ್ರಾಮ ಅರಮನೆ ಆವರಣದಲ್ಲಿ ಗುರುವಾರ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಸರಳವಾಗಿ ಜರುಗಿತು   

ಶಿಗ್ಗಾವಿ: ದಂಡನಾಯಕನಾಗಿ ಆಡಳಿತ ನಡೆಸುವ ಕನಕದಾಸರು ನಂತರ ಬದುಕಿನಲ್ಲಿ ವೈರಾಗ್ಯ ತಾಳಿ ತಮ್ಮ ಸಿರಿ ಸಂಪತ್ತನ್ನು ಇತರರಿಗೆ ದಾನ ಮಾಡಿದರು. ಸಂಗೀತ, ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಕೊಡುಗೆ ಅಪಾರ, ಅನನ್ಯವಾಗಿದೆ ಎಂದು ಬಾಡ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಹೇಳಿದರು.

ತಾಲ್ಲೂಕಿನ ಕನಕನಬಾಡ ಗ್ರಾಮ ಅರಮನೆ ಆವರಣದಲ್ಲಿ ಗುರುವಾರ ಕನಕದಾಸರ ಜಯಂತ್ಯುತ್ಸವದ ಸರಳ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನಕದಾಸರು ಸೇರಿದಂತೆ ಅನೇಕ ಪುಣ್ಯ ಪುರುಷರು ಜನಿಸಿದ ಬೀಡು ನಮ್ಮದು. ಜಾತಿ, ಮತಗಳ ನಿರ್ಮೂನೆಗಾಗಿ ಕನಕದಾಸರು ಸಾಕಷ್ಟು ಶ್ರಮಿಸಿದರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? ಎಂದು ಪ್ರಶ್ನಿಸಿದರು. ವಿಶ್ವದ ಮಹಾನ್ ಸಂತನಾಗಿ, ಭಕ್ತ ಶ್ರೇಷ್ಠರಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಅವರ ಹಳೆಯ ದೇವಸ್ಥಾನದ ಉತ್ಖನನದ ವೇಳೆ ಸಿಕ್ಕಿರುವ ವಸ್ತುಗಳ ಆಧಾರದಡಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.

ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿದರು.

ADVERTISEMENT

ಬಂಕಾಪುರ ಕೆಂಡದಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ,
ತಲ್ಲಣಿಸದಿರು ಕಂಡೆ ತಾಳು ಮನವೇ ಎಲ್ಲವನ್ನು ಸಲುಹುವನ್ನು ಆಧಿಕೇಶವನ್ನು ಎಂಬ ವಿಚಾರಧಾರೆ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಹೆದರದಿರುವ ಮನವೇ ಎಲ್ಲದಕ್ಕೂ ಪರಿಹಾರವಿದೆ ಎಂಬ ಸಂದೇಶಗಳನ್ನು ನೀಡಿದ್ದಾರೆ ಎಂದರು.

ಮುಖಂಡರಾದ ಶಿವಾನಂದ ರಾಮಗೇರಿ, ಎಂ.ಎನ್.ವೆಂಕೋಜಿ, ಗುರುನಗೌಡ ಪಾಟೀಲ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ನಿಂಗಪ್ಪ ಹರಿಜನ, ಶಾಂತಮ್ಮಾ ಬೊಮ್ಮನಹಳ್ಳಿ, ಮುಖಂಡರಾದ ಶೇಖಣ್ಣ ಕುಂದೂರ, ಸುರೇಶ ಚಿನ್ನಪ್ಪನವರ, ಮಾಲತೇಶ ಕುಂಬಾರ, ನಿಂಗಪ್ಪ ಗೋದಾಯಿ, ಜಗದೀಶ ಸಿದ್ದಪ್ಪನವರ, ಗುರುಪಾದಪ್ಪ ಕುಂದೂರ, ಅಶೋಕ ಪುಟ್ಟಪ್ಪನವರ, ಯಲ್ಲಪ್ಪ ಸಿದ್ದಪ್ಪನವರ, ಶಂಭಣ್ಣ ಕುಂದೂರ, ಗೋಕಾಕ ತಾಲ್ಲೂಕಿನ ಉಪ್ಪಾರಹಟ್ಟಿ ಆಡಿನ ಬಂಧುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.