ADVERTISEMENT

ಆಧಾರ್ ನೋಂದಣಿ ಪ್ರಕ್ರಿಯೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 9:35 IST
Last Updated 16 ಅಕ್ಟೋಬರ್ 2011, 9:35 IST

 ಮಡಿಕೇರಿ: ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆ ಕಾರ್ಡ್ ವಿತರಣೆ ಕೇಂದ್ರ ಸರ್ಕಾ ರದ ಒಂದು ಮಹಾತ್ವಾಕಾಂಕ್ಷೆ ಯೋಜನೆಯಾಗಿದ್ದು, ಎಲ್ಲಾ ಭಾರತೀ ಯರ ಗುರುತಿಸುವಿಕೆ ಮತ್ತು ಅಕ್ರಮ ಒಳ ನುಸುಳುವಿಕೆಗಳ ತಡೆಗೆ ಸಹಾಯಕ ವಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಇ-ಆಡಳಿತದ ಮೂಲಕ ಜಿಲ್ಲೆಯಾ ದ್ಯಂತ ಜಾರಿಗೊಳಿಸಲಾಗುತ್ತಿರುವ ಆಧಾರ್ ನೊಂದಣಿ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಈ ಯೋಜನೆ ಈಗಾಗಲೇ ರಾಷ್ಟ್ರ ವ್ಯಾಪಿ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮೂಲಕ ಚಾಲನೆ ದೊರೆತಿದ್ದು ಪ್ರತಿಯೊಬ್ಬರು ಇದನ್ನು ಉಚಿತವಾಗಿ ಪಡೆದುಕೊಂಡು ಸಹಕರಿಸಬೇಕು ಎಂದರು.

ಭಾರತಕ್ಕೆ ವಿದೇಶಿಯರ ಅಕ್ರಮ ಒಳನುಸುಳುವಿಕೆ ನಿರಂತರವಾಗಿದೆ. ಇದನ್ನು ತಡೆಯದೆ ಹೋದರೆ ಮುಂದೊಂದು ದಿನ ದೊಡ್ಡ ಸಮಸ್ಯೆ ಯಾಗುತ್ತದೆ. ಆದರೆ ಆಧಾರ್ ಗುರು ತಿನ ಕಾರ್ಡ್‌ನಿಂದಾಗಿ ನಿಜವಾದ ಭಾರತೀಯ ನಾಗರಿಕರ ಗುರುತಿಸುವಿಕೆಗೆ ಅನುಕೂಲವಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ. ಹೀಗಾಗಿ ಇದನ್ನು ಲಘುವಾಗಿ ಪರಿಗಣಿಸದೆ ಎಲ್ಲರೂ ಆಧಾರ್ ಸಂಖ್ಯೆಯ ನೊಂದಣಿ ಮಾಡಿಸಿ ಅಧಿಕಾರಿಗಳೊಂದಿಗೆ ಸಹಕರಿ ಸುವಂತೆ ಅವರು ತಿಳಿಸಿದರು.

ಇದೊಂದು ಉಚಿತವಾಗಿ ನೀಡುವ ಪ್ರಕ್ರಿಯೆಯಾಗಿದ್ದು ಪ್ರಾರಂಭಿಕ ಹಂತ ದಲ್ಲಿ ಜಿಲ್ಲೆಯ ನಗರ ಪಟ್ಟಣ ಪ್ರದೇಶಗಳಲ್ಲಿ ಆಧಾರ್ ನೊಂದಣಿ ಪ್ರಾರಂಭವಾಗಲಿದೆ. ಆದಷ್ಟು ಶೀಘ್ರ ವಾಗಿ ಎಲ್ಲಾ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಲಿದೆ. ಮುಂದಿನ 3 ತಿಂಗಳೊಳಗಾಗಿ ಎಲ್ಲರೂ ಆಧಾರ್ ನೊಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ ಆಧಾರ್ ವಿಶಿಷ್ಟ ಗುರುತಿನ ಚೀಟಿ ನೀಡುವಂತಹ ಯೋಜನೆ ಕಳೆದ 25 ವರ್ಷಗಳ ಹಿಂದೆಯೇ ಬಂದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಈಗಾಲಾದರೂ ಆರಂಭಗೊಂಡಿರು ವುದು ಒಳ್ಳೆಯ ಪ್ರಕ್ರಿಯೆಯಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, ಆಧಾರ್ ಎಂದರೇನು? ಆಧಾರ್ ನೊಂದಣಿ ಪ್ರಕ್ರಿಯೆ ಹೇಗೆ, ಆಧಾರ್ ಯಾಕೆ ಬೇಕು, ಪಡೆಯುವ ಬಗೆ ಹೇಗೆ, ಒದಗಿಸಬೇಕಾದ ದಾಖಲೆಗಳೇನು ಮತ್ತಿತರ ವಿಷಯಗಳ ಕುರಿತು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉ ಕಾರ್ಯದರ್ಶಿ ಬಸವರಾಜಪ್ಪ ಸ್ವಾಗತಿಸಿ ದರು. ನಗರಸಭಾ ಆಯುಕ್ತರಾದ ಶಶಿ ಕುಮಾರ್ ನಿರೂಪಿಸಿ, ವಂದಿಸಿದರು. ಇದೇ ವೇಳೆ ಅವರು ನಗರದ 4 ಸ್ಥಳಗಳಲ್ಲಿ ಅಂದರೆ ನಗರಸಭೆ, ಮೈತ್ರಿ ಸಭಾಂಗಣ, ಜನರಲ್ ತಿಮ್ಮಯ್ಯ ಶಾಲೆ ಮತ್ತು ಎ.ವಿ. ಶಾಲೆಗಳಲ್ಲಿ ಶನಿವಾರ ದಿಂದ ಆಧಾರ್ ನೊಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಿ, ನಗರಸಭಾಧ್ಯಕ್ಷರಾದ ನಂ ಕುಮಾರ್, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್, ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ, ಹಿರಿಯ ಉಪವಿಭಾಗಾಧಿಕಾರಿ ಡಾ. ಎಂ.ಆರ್.ರವಿ, ವಿವಿಧ ಇಲಾಖಾ ಅಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.