ಕುಶಾಲನಗರ: ಜಾತ್ರೆ, ಉತ್ಸವಗಳು ಗ್ರಾಮೀಣ ಪ್ರದೇಶದ ಜನಪದ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವುದರೊಂದಿಗೆ ಭಾವೈಕ್ಯತೆಗೆ ಕಾರಣವಾಗುತ್ತವೆ ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್.ರಾಜಶೇಖರ್ ಹೇಳಿದರು.
ಉತ್ತರ ಕೊಡಗಿನ ರಾಮಸ್ವಾಮಿ ಕಣಿವೆಯಲ್ಲಿ ಬುಧವಾರ ರಾತ್ರಿ ಮುಕ್ತಾಯಗೊಂಡ ರಾಮಲಿಂಗೇಶ್ವರ ವಾರ್ಷಿಕ ಜಾತ್ರೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ದೇವಾಲಯ ಸಮಿತಿ ವತಿಯಿಂದ `ಕಣಿವೆ ಶ್ರೀ~ ಪ್ರಶಸ್ತಿಯನ್ನು ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷ ಎಚ್.ಎನ್.ರಾಜಶೇಖರ್ ಅವರಿಗೆ, `ಜನಸ್ಪಂದನ ಅಧಿಕಾರಿ ಪ್ರಶಸ್ತಿ~ಯನ್ನು ಹೆಬ್ಬಾಲೆ ಗ್ರಾ.ಪಂ. ಪಿಡಿಒ ಟಿ.ಎಸ್.ಸುನಿಲ್‌ಕುಮಾರ್ ಅವರಿಗೆ ಸಮಿತಿ ಅಧ್ಯಕ್ಷ ಇ.ಎಸ್. ಗಣೇಶ್ ವಿತರಿಸಿ ಸನ್ಮಾನಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಕಳೆದ ಸಾಲಿನಲ್ಲಿ ನಡೆದ ಮೈಕ್ರೋಬಯೋಲಜಿ ಎಂಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ವಿಜೇತರಾದ ಕಣಿವೆ ಗ್ರಾಮದ ಶಂಕರನಾರಾಯಣ ಮತ್ತು ಅನ್ನಪೂರ್ಣ ಅವರ ಪುತ್ರಿ ಎಚ್.ಎಸ್.ಮೋಹಿತ ಅವರನ್ನು ಸಮಿತಿ ಕಾರ್ಯದರ್ಶಿ ಟಿ.ಎನ್.ಶೇಷಾಚಲ ಸನ್ಮಾನಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ರಘು, ಹುಲುಸೆ ಹಾಲಿನ ಡೇರಿ ಅಧ್ಯಕ್ಷ ಎಚ್.ಜೆ.ನಾಗರಾಜಚಾರಿ, ಜೇನುಕಲ್ಲುಬೆಟ್ಟ ಹಾಲಿನ ಡೇರಿ ಅಧ್ಯಕ್ಷ ಟಿ.ಕೆ.ಚಂದ್ರಶೇಖರ್ ಬಹುಮಾನ ವಿತರಿಸಿದರು.
ಹೆಬ್ಬಾಲೆ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್, ಸ್ಥಳೀಯರಾದ ಆರ್.ಆರ್.ಕುಮಾರ್, ಅಬ್ದುಲ್ ಗಫೂರ್, ವಿಜಯ್‌ಕುಮಾರ್, ಕೆ.ಎ.ಪದ್ಮಾವತಿ ಇತರರು ಇದ್ದರು.ಶಿಕ್ಷಕ ಆರ್.ಆರ್.ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಉದಯಪ್ರಕಾಶ್ ವಂದಿಸಿದರು. ಹಾಸನದ ಮೋಹನ್ ಮೆಲೋಡಿಸ್ ವತಿಯಿಂದ ರಸ ಸಂಜೆ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.