ADVERTISEMENT

ಕುಶಾಲನಗರ: ಅಪಾಯಕಾರಿ ಸ್ಫೋಟಕ ವಶ; ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 14:05 IST
Last Updated 28 ಮಾರ್ಚ್ 2019, 14:05 IST
ವಶಕ್ಕೆ ಪಡೆದ ಸ್ಫೋಟಕ ವಸ್ತುಗಳು
ವಶಕ್ಕೆ ಪಡೆದ ಸ್ಫೋಟಕ ವಸ್ತುಗಳು   

ಕುಶಾಲನಗರ: ಇಲ್ಲಿನ ಸುಂದರನಗರದ ಮಂಜು ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುಂದರನಗರದ ಆರ್. ಮಂಜು, ಮಣಿ, ಬಸವೇಶ್ವರ ಬಡಾವಣೆಯ ಕುಬೇರ, ಬೈಚನಹಳ್ಳಿ ನಿವಾಸಿ ಕೆ.ಆರ್‌.ರವಿ, ಮೈಸೂರು ಜಿಲ್ಲೆಯ ಬೆಟ್ಟದಪುರ ಹೋಬಳಿ ಹಲನಹಳ್ಳಿಯ ರಿಜ್ವಾನ್‌ ಆಹಮದ್‌ ಬಂಧಿತರು.

ಎಲೆಕ್ಟ್ರಾನಿಕ್ಸ್‌ ಡಿಟೋನೇಟರ್‌, ನಾನ್‌ ಎಲೆಕ್ಟ್ರಾನಿಕ್‌ ಡಿಟೋನೇಟರ್‌, ಅಲ್ಯುಮಿನಿಯಂ ನೈಟ್ರೇಟ್‌, ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌, ಸೇಫ್ಟಿ ಫ್ಯೂಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಸ್ಫೋಟಕ ವಸ್ತುಗಳಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು, ಜಿಲ್ಲಾ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

ADVERTISEMENT

ವಶಕ್ಕೆ ಪಡೆದುಕೊಂಡಿರುವ ವಸ್ತುಗಳು ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಯಾವ ಕಾರಣಕ್ಕೆ ಸ್ಫೋಟಕಗಳನ್ನು ದಾಸ್ತಾನು ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.