ADVERTISEMENT

ಕುಶಾಲನಗರ: ಮಹಾಯಜ್ಞಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:55 IST
Last Updated 9 ಅಕ್ಟೋಬರ್ 2011, 4:55 IST

ಕುಶಾಲನಗರ: ರಾಜ್ಯದಲ್ಲಿ ವಿಹಂಗಮ ಯೋಗ ಶಿಬಿರದ ದಕ್ಷಿಣ ಭಾರತ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಯಜ್ಞಕ್ಕೆ ಶನಿವಾರ ಕುಶಾಲನಗರದ ಆರ್‌ಎಂಸಿ ಯಾರ್ಡ್‌ನಲ್ಲಿ ಚಾಲನೆ ನೀಡಲಾಯಿತು.

ವಿಶ್ವಶಾಂತಿಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ವೈದಿಕ ಮಹಾಯಜ್ಞಕ್ಕೆ ಯೋಗದ ಸದ್ಗುರು ಸ್ವತಂತ್ರದೇವ್‌ಜೀ ಮಹಾರಾಜ್ ಹೋಮ ಕುಂಡಗಳಿಗೆ ಯಜ್ಞ ನಡೆಸುವ ಮೂಲಕ ಚಾಲನೆ ನೀಡಿದರು.

ಮಹಾಯಜ್ಞದಲ್ಲಿ 51 ಹೋಮ ಕುಂಡಗಳನ್ನಿಟ್ಟು ಯಜ್ಞ ನಡೆಸಿದ ಮಹಾರಾಜ್, ಜೀವನದಲ್ಲಿ ಪ್ರತಿಯೊ ಬ್ಬರೂ ಸುಖ, ಶಾಂತಿಗಾಗಿ ತಮ್ಮ ಮನ ಸ್ಸನ್ನು ಶುದ್ಧಿಕರಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆಧ್ಯಾತ್ಮ ಮಾರ್ಗದಲ್ಲಿ ನಡೆದರು ವಿಶ್ವಶಾಂತಿ ಲಭಿಸಲು ಸಾಧ್ಯ ಎಂದರು.

ಕುಶಾಲನಗರದಿಂದ ಆರಂಭಗೊಂಡಿ ರುವ ಮಹಾಯಜ್ಞವು ಬೆಂಗಳೂರು, ಗುಲ್ಬರ್ಗ, ಚಿತ್ರದುರ್ಗ, ದಾವಣಗೆರೆ ಮೂಲಕ ಅ. 18 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅಂತ್ಯ ಗೊಳ್ಳಲಿದೆ ಎಂದು ಪ್ರಚಾರಕ ಜೆ.ಪಿ.ರಾಯ್ ತಿಳಿಸಿದರು.

ಮಹಾಯಜ್ಞದಲ್ಲಿ ವಿಗ್ನದೇವ ಜೀ ಮಹಾರಾಜ್, ಪ್ರಮುಖ ಪ್ರಚಾರಕ ರಾದ ಬಿ.ಅಮೃತ್‌ರಾಜ್ ರಿತೇಶ್, ವಿವೇಕ್ ಸೇರಿದಂತೆ ನೂರಾರು ಸಂಖ್ಯೆ ಯಲ್ಲಿ ಆಸ್ತಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.