ADVERTISEMENT

ಕೊಡಗು: 17 ಅಭ್ಯರ್ಥಿಗಳು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 11:33 IST
Last Updated 28 ಏಪ್ರಿಲ್ 2018, 11:33 IST

ಮಡಿಕೇರಿ: ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ವಾಪಸ್ ಪಡೆಯಲು ಕಡೆ ದಿನವಾದ ಶುಕ್ರವಾರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ವೀಕೃತವಾಗಿದ್ದ ಒಟ್ಟು 24 ಅಭ್ಯರ್ಥಿಗಳಲ್ಲಿ 7 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಉಳಿದಂತೆ 17 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಮಡಿಕೇರಿ ಕ್ಷೇತ್ರ: 13 ಅಭ್ಯರ್ಥಿಗಳಲ್ಲಿ 2 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಉಳಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಪ್ಪಚ್ಚುರಂಜನ್ (ಬಿಜೆಪಿ), ಕೆ.ಪಿ.ಚಂದ್ರಕಲಾ (ಕಾಂಗ್ರೆಸ್), ಜೀವಿಜಯ (ಜೆಡಿಎಸ್), ಭಾರ್ಗವ (ಎಬಿಎಚ್‌ಎಂಎಸ್), ರಶೀದಾ ಬೇಗಂ(ಎಐಎಂಇಪಿ), ಕೆ.ಬಿ.ರಾಜು (ಭಾರತೀಯ ರಿಪಬ್ಲಿಕ್ ಪಕ್ಷ), ಕಿಶನ್, ಖಲೀಲ್, ಬಿ.ಎಂ.ತಿಮ್ಮಯ್ಯ, ಎಂ.ಮಹಮದ್ ಹನೀಫ್, ಪಿ.ಎಸ್.ಯಡೂರಪ್ಪ ಪಕ್ಷೇತರ ರಾಗಿ ಕಣದಲ್ಲಿದ್ದಾರೆ. ನಾಪಂಡ ಮುತ್ತಪ್ಪ ಮತ್ತು ಹೇಮಂತ್ ಕುಮಾರ್‌ ನಾಮಪತ್ರ ವಾಪಸ್ ಪಡೆದಿದ್ದಾರೆ.

ವಿರಾಜಪೇಟೆ ಕ್ಷೇತ್ರ: 11ಅಭ್ಯರ್ಥಿಗಳು ನೀಡಿರುವ ನಾಮಪತ್ರದಲ್ಲಿ 5 ಮಂದಿ ವಾಪಸ್ ಪಡೆದಿದ್ದು, ಉಳಿದಂತೆ 6 ಮಂದಿ ಕಣದಲ್ಲಿದ್ದಾರೆ. ಸಿ.ಎಸ್.ಅರುಣ್ ಮಾಚಯ್ಯ (ಕಾಂಗ್ರೆಸ್), ಕೆ.ಜಿ.ಬೋಪಯ್ಯ (ಬಿಜೆಪಿ), ಸಂಕೇತ್ ಪೂವಯ್ಯ (ಜೆಡಿಎಸ್), ಎಚ್.ಡಿ. ಬಸವರಾಜು (ಎಐಎಂಇಪಿ), ಎಚ್.ಡಿ.ದೊಡ್ಡಯ್ಯ, ಎಂ.ಕೆ. ನಂಜಪ್ಪ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ADVERTISEMENT

ನಾಮಪತ್ರ ವಾಪಸ್ ಪಡೆದವರು: ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಪ್ಪಚಂಡ ಗಿರಿ ಉತ್ತಪ್ಪ, ಎಂ.ಪದ್ಮಿನಿ ಪೊನ್ನಪ್ಪ, ಎಂ.ಕೆ.ಫೈಜಲ್, ಪಿ.ಎಸ್.ಮುತ್ತ ಹಾಗೂ ಕೆ.ಇ.ಹರೀಶ್ ಬೋಪಣ್ಣ ನಾಮಪತ್ರ ವಾಪಸ್ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.