ADVERTISEMENT

ನಾಪೋಕ್ಲು: ನೃತ್ಯ, ನಾಟಕಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 6:05 IST
Last Updated 7 ಜುಲೈ 2012, 6:05 IST

ನಾಪೋಕ್ಲು: ಶ್ರಿರಾಮಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ಈಚೆಗೆ ಜರುಗಿದ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರತಿಭಾಪ್ರದರ್ಶನ ಮಾಡಿದರು.

ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕ, ನೃತ್ಯ ಗಮನ ಸೆಳೆಯಿತು. ಆರನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕ `ಕರಾವಳಿಕೇಸರಿ~ ಗಮನಸೆಳೆಯಿತು.

ವಿವಿಧ ಪಾತ್ರಾಭಿನಯವನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರೆ, ಪ್ರೌಢಶಾಲಾ ವಿದ್ಯಾರ್ಥಿಗಳು ಸಮೂಹ ಗಾಯನ ಹಾಡಿದರು. ಮಾತ್ರವಲ್ಲ `ಭಾಗ್ಯದ ಬಳೆಗಾರ ಹೋಗಿ ಬಾ ತವರಿಗೆ~ ಜನಪದ ನೃತ್ಯಕೆ ಹೆಜ್ಜೆ ಹಾಕಿದರು. ಪಾಶ್ಚಾತ್ಯ ನೃತ್ಯದಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡರು.

`ವಿದ್ಯಾರ್ಥಿಗಳು ನಾಟಕದಲ್ಲಿ ಪಾಲ್ಗೊಳ್ಳುವುದರಿಂದ ಅಭಿನಯ ಕಲೆ ರೂಢಿಸಿಕೊಳ್ಳುತ್ತಾರೆ. ಸಂಭಾಷಣಾ ಕಲೆ, ಭಾಷಾ ಸಾಮರ್ಥ್ಯ ವೃದ್ದಿಸುತ್ತದೆ. ವಿದ್ಯಾರ್ಥಿ ಸಂಘದ ಮೂಲಕ ಭಾಷಾ ಜ್ಞಾನ ಹೆಚ್ಚಿಸುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತೇವೆ~ ಎಂದು ಮಕ್ಕಳಿಗೆ ನಾಟಕ ತರಬೇತಿ ನೀಡಿದ ಶಾಲೆಯ ಕನ್ನಡ ಶಿಕ್ಷಕಿ ಸುಬ್ಬಮ್ಮ ತಿಳಿಸಿದರು.

ವಿದ್ಯಾರ್ಥಿ ಸಂಘದ ಮೂಲಕ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳುವ ವಿವಿಧ ದಿನಾಚರಣೆಗಳ ಸಂದರ್ಭ ಹಲವು ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳು ತೊಡಗಿಸಿಕೊಳ್ಳತ್ತಾರೆ. ಎಂದು ವಿವರಿಸಿದರು.

ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ನಡುವೆ ಪಠ್ಯೇತರ ಚಟುವಟಿಕೆಗಳು ಶಾಲಾ ವಾರ್ಷಿಕೋತ್ಸವದ ವರೆಗೆ ನಿರಂತರವಾಗಿ ನಡೆಯುತ್ತವೆ. ಸೂಕ್ತ ಪ್ರೋತ್ಸಾಹ ಇರುವುದರಿಂದ ಮಕ್ಕಳು ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.