ADVERTISEMENT

ಪರಿಸರ ಸೂಕ್ಷ್ಮವಲಯ ಯೋಜನೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:00 IST
Last Updated 21 ಸೆಪ್ಟೆಂಬರ್ 2011, 6:00 IST

ಗೋಣಿಕೊಪ್ಪಲು: ಅರಣ್ಯ ಪ್ರದೇಶ ದಿಂದ 10 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದನ್ನು ವಿರೋಧಿಸಿ ಸೋಮವಾರ ಶ್ರೀಮಂಗಲದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಅಂಗಡಿ ಮುಂಗಟ್ಟು ಗಳನ್ನು ಒಂದೂವರೆ ಗಂಟೆ ಮುಚ್ಚಿ ಪ್ರತಿ ಭಟಿಸಲಾಯಿತು. ಬಳಿಕ ನಡೆದ ಸಭೆ ಯಲ್ಲಿ ಜಿಲ್ಲಾ ಸಾರ್ವಜನಿಕ  ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಟ್ಟಿಮಂದಯ್ಯ ಮಾತನಾಡಿ ಪರಿಸರ ಸೂಕ್ಷ್ಮ ವಲಯ ಯೋಜನೆಯಿಂದ ನಾಗರಿಕರಿಗೆ ತೊಂದರೆಯಾಗಿದೆ. ಸರ್ಕಾರ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಯನ್ನು ಜಾರಿಗೊಳಿಸಲು ಯತ್ನಿಸಿದೆ ಎಂದು ಆರೋಪಿಸಿದರು.

ಪರಿಸರವಾದಿಗಳು ವಿದೇಶದ ಹಣದ ಆಸೆಗಾಗಿ ಕೊಡಗಿಗೆ ಮಾರಕವಾಗಿರುವ ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ. ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಪರಿಸರ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.

   ಶ್ರೀಮಂಗಲ ನಾಗರಿಕ ಹೋರಾಟ ಸಮಿತಿ ಅಧ್ಯಕ ಎಂ.ಟಿ.ಕಾರ್ಯಪ್ಪ ಮಾತನಾಡಿ ಗಿರಿಜನರನ್ನು ನಾಗರಹೊಳೆ ಅರಣ್ಯದಿಂದ ಈಗಾಗಲೆ ಒಕ್ಕಲೆಬ್ಬಿಸಲಾಗಿದೆ. ಮುಂದೆ ಬೆಳೆಗಾರರನ್ನು ಇದೇ ರೀತಿ ಒಕ್ಕಲೆಬ್ಬಿಸುವ ದಿನ ದೂರವಿಲ್ಲ. ಇದರ ವಿರುದ್ಧ ಸಾಂಘಿಕ ಹೋರಾಟದ ಅಗತ್ಯವಿದೆ ಎಂದು ನುಡಿದರು.

 ಜನತೆಯ ಹೋರಾಟದಿಂದ ಇರ್ಪು, ಬರಪೊಳೆ ಮೊದಲಾದ ಯೋಜನೆಗಳು ರದ್ದಾದವು. ಪರಿಸರ ಸೂಕ್ಷ್ಮ ಯೋಜನೆ ವಿರುದ್ಧ ಕೂಡ ನಿರಂತರ ಹೋರಾಟ ನಡೆಸುವುದು ಅನಿವಾರ್ಯ ಎಂದರು.

ವಿರಾಜಪೇಟೆ ತಾಲ್ಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಾಮಾಡ ಶಂಕರು ನಾಚಪ್ಪ, ಜಿ.ಪಂ. ಸದಸ್ಯೆ ಶರೀನ್ ಸುಬ್ಬಯ್ಯ, ತಾ.ಪಂ. ಸದಸ್ಯರಾದ ಅರುಣ್ ಭೀಮಯ್ಯ, ತೀತಿರ ಊರ್ಮಿಳಾ, ಬೆಳೆಗಾರರ ಒಕ್ಕೂಟದ ಸದಸ್ಯ ಮಾಣಿರ ಮುತ್ತಪ್ಪ, ತಾ.ಪಂ.ಮಾಜಿ ಸದಸ್ಯ ಬೊಟ್ಟಂಗಡ ರಾಜು, ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಗೆ, ಉಪಾಧ್ಯಕ್ಷೆ ಪಂದ್ಯಂಡ ಮುತ್ತಮ್ಮ, ಸದಸ್ಯರಾದ ಅಜ್ಜಾಮಾಡ ಜಯ, ದಾಕ್ಷಾಯಿಣಿ, ವಾಣಿ, ಮಾದಪ್ಪ,  ತಮ್ಮು ಮುತ್ತಣ್ಣ, ರಾಜು, ಅಯ್ಯಪ್ಪ, ನಾಗರಿಕ ಹೋರಾಟ  ಸಮಿತಿ ಉಪಾ ಧ್ಯಕ್ಷ ಅಜ್ಜಾಮಾಡ ಪಿ.ಕುಶಾಲಪ್ಪ, ಮಾಣೀರ ವಿಜಯ್ ನಂಜಪ್ಪ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.