ADVERTISEMENT

ಪೈಸಾರಿ ಜಾಗದ ಸರ್ವೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 9:20 IST
Last Updated 23 ಸೆಪ್ಟೆಂಬರ್ 2011, 9:20 IST

ಸೋಮವಾರಪೇಟೆ: ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗದ ಸರ್ವೆ ನಡೆಸಿ ಅತಿಕ್ರಮಿಸಿದ ಸ್ಥಳವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಗುರುವಾರ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಕ್ಕೆಹೊಳೆ ಬಳಿ ಪಂಚಾಯಿತಿಗೆ ಸೇರಿದ ಪೈಸಾರಿ ಜಾಗ ದಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಬಿ.ಎಸ್.ರವಿಚಂದ್ರ, ಎಂ.ಇ.ಫಯಾಜ್‌ಖಾನ್ ಆಗ್ರಹಿಸಿದರು. ಸದಸ್ಯೆ ಶೀಲಾ ಡಿಸೋಜಾ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೇವಲ ಒಂದು ವಾರ್ಡ್‌ನ ಬಗ್ಗೆ ಇಂತಹ ನಿರ್ಧಾರ ತೆಗೆದು ಕೊಳ್ಳುವ ಬದಲು ಪಂಚಾಯಿತಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿಯೂ ಪೈಸಾರಿ ಜಾಗವನ್ನು ಸರ್ವೆ ನಡೆಸಿ ಅತಿಕ್ರಮಣವಾಗಿದ್ದರೆ ತೆರವುಗೊಳಿಸ ಬೇಕು ಎಂದಾಗ ಎಲ್ಲ ಸದಸ್ಯರೂ ಇದಕ್ಕೆ ದನಿಗೂಡಿಸಿದರು.

ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿ ಸಿದ್ದರೂ ಇನ್ನೂ ಕೆಲವು ಕಡೆ ಪೆಟ್ಟಿಗೆ ಅಂಗಡಿಗಳು ಹಾಗೆಯೇ ಉಳಿದಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸದಸ್ಯರಾದ ಬಿ.ಇ.ರಮೇಶ್, ಬಿ.ಎಸ್.ರವಿಚಂದ್ರ ಹಾಗೂ ಎಂ.ಇ.ಫಯಾಜ್‌ಖಾನ್ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಎನ್.ಎಸ್.ಮೂರ್ತಿ ಪ್ರತಿ ಕ್ರಿಯಿಸಿ, ಪೆಟ್ಟಿಗೆ ಅಂಗಡಿಗಳನ್ನು ತೆರವು ಗೊಳಿಸುವಂತೆ ಸೂಚಿಸಿದ್ದರೂ ಕ್ರಮ ಕೈಗೊಳ್ಳದ್ದಕ್ಕೆ ಅಧಿಕಾರಿಗಳನ್ನು ತರಾ ಟೆಗೆ ತೆಗೆದುಕೊಂಡರು. ಇನ್ನೆರಡು ದಿನಗಳ ಒಳಗೆ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವು ದಾಗಿ ಕಂದಾಯ ಪರಿವೀಕ್ಷಕ ರಂಜನ್ ಮಾಹಿತಿ ನೀಡಿದರು. 

ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮ ಗಾರಿಗಳನ್ನು ಕೈಗೊಳ್ಳುವಾಗ ಅರ್ಜಿ ಗಳನ್ನು ಪಟ್ಟಣ ಪಂಚಾಯಿತಿಯಿಂದಲೇ ವಿತರಿಸಬೇಕು. ಇಲ್ಲವಾದರೆ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವುದರಿಂದ ಗುಣಮಟ್ಟ ಕಳಪೆ ಯಾಗುವ ಸಾಧ್ಯತೆ ಅಧಿಕವಾಗುತ್ತದೆ. ಇದನ್ನು ತಪ್ಪಿಸಲು ಟೆಂಡರ್ ಕರೆದು ಕಾಮಗಾರಿ ನೀಡಬೇಕು ಎಂದು ಸದಸ್ಯೆ ವಿಜಯಲಕ್ಷ್ಮಿ ಸುರೇಶ್ ಸಲಹೆ ನೀಡಿದರು.

ಅಗತ್ಯವಿರುವ ಕಡೆ ತಡೆಗೋಡೆ ನಿರ್ಮಿಸಬೇಕು ಎಂದು ಸುಂದರ ಮೂರ್ತಿ ಹೇಳಿದಾಗ, ಬಿ.ಎಂ.ಸುರೇಶ್ ದನಿಗೂಡಿಸಿದರು. ಸಭೆಯ ಅಜೆಂಡಾ ಸದಸ್ಯರಿಗೆ ಸಿಗುವ ಮೊದಲೇ ಅದರಲ್ಲಿ ರುವ ವಿಷಯಗಳು ಜನರಿಗೆ ಗೊತ್ತಾಗಿ ರುತ್ತವೆ ಎಂದು ಬಿ.ಇ.ರಮೇಶ್, ರವಿಚಂದ್ರ ಹಾಗೂ ದಾಕ್ಷಾಯಿಣಿ ಆಪಾ ದಿಸಿದರು. ಮಹದೇಶ್ವರ ಬಡಾವಣೆ ಯಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ರಿಪೇರಿ ಮಾಡುವ ಕಾಮಗಾರಿಗೆ ಸಭೆ ಒಪ್ಪಿಗೆ ಸೂಚಿಸಿತು.

ಹಳೆಯ ಕಸಾಯಿಖಾನೆ ಕಟ್ಟಡವನ್ನು ಕೆಡವಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಉಪಾಧ್ಯಕ್ಷೆ ನಳಿನಿ ಗಣೇಶ್, ಮುಖ್ಯಾಧಿಕಾರಿ ಕೆಂಚಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.