ADVERTISEMENT

ಪ್ರಭಾಕರ್‌ ಭಟ್‌ ನನ್ನ ವಿರುದ್ಧ ಸ್ಪರ್ಧಿಸಲಿ: ರಮಾನಾಥ್‌ ರೈ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 7:08 IST
Last Updated 16 ಡಿಸೆಂಬರ್ 2017, 7:08 IST
ರಮಾನಾಥ್ ರೈ
ರಮಾನಾಥ್ ರೈ   

ವಿರಾಜಪೇಟೆ: ‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ಸಾಮರ್ಥ್ಯವಿದ್ದರೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ. ಒಂದು ವೇಳೆ ಸ್ಪರ್ಧಿಸಿದರೆ ಠೇವಣಿ ಕೂಡ ಬರುವುದಿಲ್ಲ’ ಎಂದು ಸಚಿವ ರಮಾನಾಥ್ ರೈ ಇಲ್ಲಿ ಶುಕ್ರವಾರ ಸವಾಲು ಹಾಕಿದರು.

'ದೇವಾಲಯದ ಹಣ ದೇವಾಲಯಕ್ಕೆ ಬಳಕೆಯಾಗಬೇಕೆ ಹೊರತು ಬೇರೆ ಕೆಲಸಕ್ಕೆ ಅಲ್ಲ. ಬಿಸಿಯೂಟದ ಸೌಲಭ್ಯ ಅವರ ಅನುದಾನಿತ ಶಾಲೆಗೂ ಒದಗಿಸಲಾಗಿದೆ. ಅವರಿಗೆ ಬಿಸಿಯೂಟ ಬೇಕಿರಲಿಲ್ಲ. ಹಣ ಬೇಕಿತ್ತು. ನಾನು ಮಕ್ಕಳ ಅನ್ನಕ್ಕೆ ತೊಂದರೆ ಮಾಡಿಲ್ಲ, ಮಂಜೂರಾದ ಶಾಲೆಯೊಂದನ್ನು ತನ್ನ ಸ್ವಾರ್ಥಕ್ಕಾಗಿ ಅವರೇ ಮುಚ್ಚಿಸಿದವರು' ಎಂದು ಆರೋಪಿಸಿದರು.

'ಕಾಂಗ್ರೆಸ್‌ ಎಲ್ಲ ಮುಖಂಡರೂ ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ. ಭಿನ್ನಾಭಿಪ್ರಾಯದ ವಿಚಾರ ಮಾಧ್ಯಮಗಳಲ್ಲಿ ಮಾತ್ರ ಪ್ರಕಟವಾಗುತ್ತಿದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಗುಜರಾತ್‌ ಚುನಾವಣಾ ಪೂರ್ವ ಫಲಿತಾಂಶವೇ ಬೇರೆ, ನೈಜ ಫಲಿತಾಂಶವೇ ಬೇರೆ ಇರುತ್ತದೆ' ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.