ADVERTISEMENT

ಬಿ.ಸಿ. ಶಂಕರಯ್ಯಗೆ ಕಾಯಕಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 6:37 IST
Last Updated 5 ಜೂನ್ 2013, 6:37 IST

ಕುಶಾಲನಗರ: ಬೆಂಗಳೂರಿನ ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ನೀಡುವ 2013ನೇ ಸಾಲಿನ `ಜಗಜ್ಯೋತಿ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ'ಗೆ ಕುಶಾಲನಗರದ ಸಂಗೀತಾ ಕಲಾಕೇಂದ್ರದ ನೃತ್ಯ ಗುರುಗಳಾದ ವಿದ್ವಾನ್ ಬಿ.ಸಿ. ಶಂಕರಯ್ಯ ಅವರು ಭಾಜನರಾಗಿದ್ದಾರೆ.

ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ  ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ  ಕಾರ್ಯಕ್ರಮದಲ್ಲಿ ಶಂಕರಯ್ಯ ಅವರಿಗೆ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

35 ವರ್ಷಗಳಿಂದಲೂ ಶಿಕ್ಷಕರಾಗಿ ಸೇವೆ ಸಲ್ಲಿಸುವ ಜತೆಗೆ ಸಂಗೀತಾ ಕಲಾಕೇಂದ್ರವನ್ನು ಸ್ಥಾಪಿಸಿ ಸಾವಿರಾರೂ ವಿದ್ಯಾರ್ಥಿಗಳಿಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕಲಿಸುತ್ತಿದ್ದಾರೆ. ಇವರ ಸಮಾಜ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಸಂದರ್ಭ ಖ್ಯಾತ ನಿರ್ದೇಶಕ ಎಸ್.ಕೆ.ಭಗವಾನ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.