ಕುಶಾಲನಗರ: `ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ದಿಸೆಯಲ್ಲಿ `ಭೂಚೇತನ~ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.
ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಶನಿವಾರ `ಭೂಚೇತನ~ ಯೋಜನೆಯಡಿ ಏರ್ಪಡಿಸಿದ್ದ ಮೆಕ್ಕೆಜೋಳ ಬೆಳೆ ಕುರಿತ ಕ್ಷೇತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಖುಷ್ಕಿ ಬೆಳೆಗಳಲ್ಲಿ ಬೇಸಾಯ ತಾಂತ್ರಿ ಕತೆ ಅಳವಡಿಸಿ ಇಳುವರಿ ಮಟ್ಟ ಹೆಚ್ಚಿ ಸುವ ಉದ್ದೇಶದೊಂದಿಗೆ ಮೆಕ್ಕೆಜೋಳ ದಂತಹ ಬೆಳೆಯಲ್ಲಿ ಶೇ.20 ರಷ್ಟು ಹೆಚ್ಚುವರಿ ಉತ್ಪಾದಕತೆ ಸಾಧಿಸುವುದು ಯೋಜನೆ ಉದ್ದೇಶವಾಗಿದೆ ಎಂದರು.
ಕ್ಷೇತ್ರೋತ್ಸವ ಉದ್ಘಾಟಿಸಿದ ಜಿ.ಪಂ.ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ, ರೈತರು ಬಹುಪಯೋಗಿ ಬೆಳೆಯಾದ ಮೆಕ್ಕೆ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ ಎಚ್.ಎಸ್.ರಾಜಶೇಖರ್ ಮಾತನಾಡಿ ದರು. ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಬಿ.ಸಿ.ಸುಲೋಚನಾ, ಸಿ.ಕೆ.ಇಂದಿರಮ್ಮ, ತಾ.ಪಂ. ಸದಸ್ಯ ಸತೀಶ್, ಗ್ರಾ.ಪಂ. ಉಪಾಧ್ಯಕ್ಷ ಪ್ರಸನ್ನ, ಕೃಷಿ ಇಲಾಖೆಯ ಆತ್ಮಯೋಜನೆಯ ಜಿಲ್ಲಾ ಉಪ ಯೋಜನಾ ನಿರ್ದೇಶಕ ಲಕ್ಷ್ಮಣಯ್ಯ, ಸಹಾಯಕ ಕೃಷಿ ಅಧಿಕಾರಿ ಮಾಧವರಾವ್, ಗ್ರಾ.ಪಂ.ಸದಸ್ಯರು ಇದ್ದರು.
ಮಂಡ್ಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ತಜ್ಞ ಡಾ. ಪುಟ್ಟರಾಮ ನಾಯಕ್ ಮೆಕ್ಕೆಜೋಳ ಕೃಷಿ ಕುರಿತು, ಬಿ.ಎಂ.ಯಲ್ಲಪ್ಪ ಕೃಷಿ ತಾಂತ್ರಿಕತೆ ಕುರಿತು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.