ADVERTISEMENT

ಮನಸೂರೆಗೊಂಡ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:50 IST
Last Updated 2 ಡಿಸೆಂಬರ್ 2013, 8:50 IST

ಕುಶಾಲನಗರ: ಒಂದೆಡೆ ಬಲಿಚಕ್ರವರ್ತಿ ಇನ್ನೊಂದೆಡೆ ಕಲಾ ಸಂಪತ್ತೇ ಇರುವ ಜಾನಪದ ಕಲೆಗಾರರ ದಂಡು, ಮತ್ತೊಂದೆಡೆ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು. ಇದು ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ಈಚೆಗೆ ನಡೆದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಂಡುಬಂದ ದೃಶ್ಯಗಳು.

ಕೊಡಗು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್‌ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆಗಳನ್ನು ಅನಾವರಣಗೊಳಿಸಿದರು.

ಈ ಸಂದರ್ಭ ಬಲಿಚಕ್ರವರ್ತಿ ವೇಷಧರಿಸಿ ಪ್ರದರ್ಶನ ನೀಡಿದ್ದು ಸಭಿಕರನ್ನು ಮನಸೂರೆಗೊಳಿಸಿತು. ಅಲ್ಲದೇ, ಕೋಲಾಟ ಸೇರಿದಂತೆ ವಿದ್ಯಾರ್ಥಿಗಳು ನೀಡಿದ ಜಾನಪದ ನೃತ್ಯಗಳು ನೋಡುಗರ ಮನಸೂರೆಗೊಳಿಸಿದವು.

ರಾಜೇಶ್, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾರಾಯಣ, ನಿರ್ದೇಶಕರಾದ ಜಿ.ಎಲ್. ನಾಗರಾಜು, ನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.