ADVERTISEMENT

ಮಾದಾಪುರ ಗ್ರಾಮ ಪಂಚಾಯಿತಿ ಸಭೆಯಲ್ಲಿ ಗಲಾಟೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 9:48 IST
Last Updated 8 ಮಾರ್ಚ್ 2018, 9:48 IST

ಸೋಮವಾರಪೇಟೆ: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಅಧ್ಯಕ್ಷೆ ಲತಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗದ್ದಲ, ಗಲಾಟೆ, ಹಲ್ಲೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಆಶ್ರಯ ಮನೆ ಯೋಜನೆಯಡಿ ಫಲಾನುಭವಿಗಳಿಂದ ಲಂಚ ಪಡೆದಿರುವ ಬಗ್ಗೆ, ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಸಭೆ ಪ್ರಾರಂಭವಾದ ಕೂಡಲೇ ಕೂಗಾಟ ಪ್ರಾರಂಭಿಸಿದರು. ಇದು ಮಧ್ಯಾಹ್ನ 1.30ರವರೆಗೂ ಮುಂದುವರಿದಿತ್ತು. ಬೇರಾವುದೇ ವಿಷಯಗಳು ಚರ್ಚೆಯಾಗದೆ, ಸದಸ್ಯ ಮಜೀದ್ ಮೇಲೆ ಹಲ್ಲೆ ನಡೆಯುವುದರೊಂದಿಗೆ ಕೊನೆಯಾಗಿದೆ.

ಸಭೆಯಲ್ಲಿ ‘ನನ್ನನ್ನು ದೇಶದ್ರೋಹಿ’ ಎಂದು ದೂರಿದರು. ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಜೀದ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಸದಸ್ಯರಾದ ಸೋಮಪ್ಪ ಹಾಗೂ ಪ್ರಸನ್ನ ಅವರು ಜಾತಿ ನಿಂದನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೆ.ಕೆ. ಭಾಸ್ಕರ್‌ ಸಾಹಿ, ದಯಾನಂದ, ಅಶೋಕ್, ಜಯಾರಾಂ, ಶ್ರೀ ವಿರುದ್ಧ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.